ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ‘ರಾಜಕುಮಾರ' ಚಿತ್ರೀಕರಣವನ್ನು ಹೆಚ್ಚು ಕಮ್ಮಿ ಮುಗಿಸಿರುವ ಪುನೀತ್‌ ರಾಜ್‌ಕುಮಾರ್‌ ಅವರ ಮುಂದಿನ ಸಿನಿಮಾ ಯಾವುದು? ಹೀಗೊಂದು ಲೆಕ್ಕಾಚಾರ ಶುರುವಾಗುವ ಮುನ್ನವೇ ಹರ್ಷ ನಿರ್ದೇಶನದಲ್ಲಿ ‘ಅಂಜನಿಪುತ್ರ' ಚಿತ್ರಕ್ಕೆ ಮುಹೂರ್ತ ಆಗಿದೆ. ಈ ಚಿತ್ರಕ್ಕೆ ಪುನೀತ್‌ ಹೀರೋ. ‘ಕಿರಿಕ್‌ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ನಾಯಕಿ. ಈ ನಡುವೆ ನಿರ್ದೇಶಕ ಸೂರಿ ಜತೆ ಹೋಗಿ ಪುನೀತ್‌ ರಾಜ್‌ಕುಮಾರ್‌ ವೆಟ್ರಿಮಾರನ್‌ ಎಂಬ ತಮಿಳು ನಿರ್ದೇಶಕರನ್ನು ಭೇಟಿ ಮಾಡಿ ಬಂದಿರುವ ವರ್ತಮಾನ ಬಂದಿದೆ.
ಬೆಂಗಳೂರು(ಫೆ.09): ಸಂತೋಷ್ ಆನಂದ್ರಾಮ್ ನಿರ್ದೇಶನದ ‘ರಾಜಕುಮಾರ' ಚಿತ್ರೀಕರಣವನ್ನು ಹೆಚ್ಚು ಕಮ್ಮಿ ಮುಗಿಸಿರುವ ಪುನೀತ್ ರಾಜ್ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಹೀಗೊಂದು ಲೆಕ್ಕಾಚಾರ ಶುರುವಾಗುವ ಮುನ್ನವೇ ಹರ್ಷ ನಿರ್ದೇಶನದಲ್ಲಿ ‘ಅಂಜನಿಪುತ್ರ' ಚಿತ್ರಕ್ಕೆ ಮುಹೂರ್ತ ಆಗಿದೆ. ಈ ಚಿತ್ರಕ್ಕೆ ಪುನೀತ್ ಹೀರೋ. ‘ಕಿರಿಕ್ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ನಾಯಕಿ. ಈ ನಡುವೆ ನಿರ್ದೇಶಕ ಸೂರಿ ಜತೆ ಹೋಗಿ ಪುನೀತ್ ರಾಜ್ಕುಮಾರ್ ವೆಟ್ರಿಮಾರನ್ ಎಂಬ ತಮಿಳು ನಿರ್ದೇಶಕರನ್ನು ಭೇಟಿ ಮಾಡಿ ಬಂದಿರುವ ವರ್ತಮಾನ ಬಂದಿದೆ.
ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿ ಅದು ಕನ್ನಡಕ್ಕೂ ರಿಮೇಕ್ ಆಗುತ್ತಿರುವ ಸರದಿಯಲ್ಲಿರುವ ‘ವಿಸಾರಣೈ' ಚಿತ್ರದ ನಿರ್ದೇಶಕನೇ ವೆಟ್ರಿಮಾರನ್. ನಿರ್ದೇಶನದ ಜತೆಗೆ ನಟನೆಯನ್ನೂ ಮಾಡುತ್ತಿರುವ ವೆಟ್ರಿಮಾರನ್ಗೆ, ಸೂಕ್ಷ್ಮ ಕತೆಗಳನ್ನು ತೆರೆ ಮೇಲೆ ತರುವ ಜಾಣ್ಮೆ ಇದೆ. ಇಂಥ ನಿರ್ದೇಶಕರ ಜತೆ ತಮ್ಮ ಮುಂದಿನ ಸಿನಿಮಾ ಮಾಡುವುದಕ್ಕೆ ಪುನೀತ್ರಾಜ್ಕುಮಾರ್ ಯೋಚಿಸುತ್ತಿದ್ದಾರೆ. ಆ ನಿಟ್ಟಿನಲ್ಲೇ ವೆಟ್ರಿಮಾರನ್ ಅವರನ್ನು ಭೇಟಿ ಮಾಡಿ ಬಂದಿದ್ದು, ತಮ್ಮ ಮುಂದಿನ ಚಿತ್ರಕ್ಕೆ ಕತೆ ಮಾಡಿಕೊಳ್ಳುವಂತೆ ಹೇಳಿದ್ದಾರೆ ಅಪ್ಪು.
ತಮ್ಮ ಚಿತ್ರಗಳನ್ನು ನಿರ್ದೇಶನ ಮಾಡಲು ಮುಂದೆ ಬರುತ್ತಿರುವ ನಿರ್ದೇಶಕರು ಕೇವಲ ಕಮರ್ಷಿಲ್ ಸಿನಿಮಾಗಳನ್ನು ನಂಬಿ ಕೂತವರಲ್ಲ. ಅಪ್ಪಟ ನೆಲದ ಕತೆಗಳನ್ನು ಹುಡುಕುವಲ್ಲಿ ಪರಿಣಿತರು. ಜತೆಗೆ ಸಾಮಾನ್ಯ ಪ್ರೇಕ್ಷಕನಿಗೆ ಎಂಥ ಸಿನಿಮಾ ಮಾಡಬೇಕೆಂಬ ತಿಳುವಳಿಕೆ ಇದ್ದವರು. ಸಮುದ್ರ ಖಣಿ ಅವರನ್ನೇ ತೆಗೆದುಕೊಳ್ಳಿ, ತಮಿಳು ಚಿತ್ರರಂಗದಲ್ಲಿ ಹೊಸ ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾಗಳ ಹಿಂದೆ ಕೇಳಿಬರುವ ಕೆಲವೇ ಹೆಸರುಗಳಲ್ಲಿ ಇವರದ್ದು ಬಹು ಮುಖ್ಯ ಹೆಸರು. ನಿರ್ದೇಶನದ ಜತೆಗೆ ನಟನೆ ಕೂಡ ಮಾಡುವ ಸಮುದ್ರ ಖಣಿ ತಮ್ಮದೇ ಆದ ತಂಡ ಕಟ್ಟಿಕೊಂಡು ಹೊಸ ಕತೆಗಳನ್ನು ಹುಡುಕುವ ಅಸಾಮಿ. ಹೀಗಾಗಿ ಅವರದ್ದೇ ನಿರ್ದೇಶನದ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ಹೊರಟಾಗ ‘ಯಾರೇ ಕೂಗಾಡಲಿ' ಚಿತ್ರಕ್ಕೆ ಸಮುದ್ರ ಖಣಿ ಅವರನ್ನೇ ಕರೆತಂದರು. ವೆಟ್ರಿ ಮಾರನ್ ಕೂಡ ಇದೇ ಸಾಲಿಗೆ ಸೇರುವ ನಿರ್ದೇಶಕ.
