ಮೋದಿ ಒಪ್ಪಿಗೆ ಕೊಟ್ಟರೆ ದಾವೂದ್ ಸಂದರ್ಶನಕ್ಕೆ ನಾನು ರೆಡಿ 

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎಲ್ಲಿದ್ದಾರೆಂದು ಭಾರತಕ್ಕೆ ತಿಳಿದಿಲ್ಲ. ಆದರೆ, ಬಾಲಿವುಡ್‌ನ ಒಬ್ಬ ನಟನೀಗ ದಾವೂದ್‌ನ ಸಂದರ್ಶನ ಮಾಡುವ ಒಲವು ತೋರಿದ್ದಾರೆ. ‘ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋ’ದಲ್ಲಿ ಬರುವ ಗುತ್ತಿ ಖ್ಯಾತಿಯ ಸುನೀಲ್ ಗ್ರೋವರ್ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನೇ ಬರೆದಿದ್ದಾರೆ. ವಿಶಾಲ್ ಮಿಶ್ರಾ ನಿರ್ದೇಶನದ ‘ಕಾಫಿ ವಿತ್ ದಿ’ ಕಾಮಿಡಿ ಚಿತ್ರದಲ್ಲಿ ಸುನೀಲ್ ನಟಿಸುತ್ತಿದ್ದು, ಅಲ್ಲಿ ಇವರು ಪತ್ರಕರ್ತನಾಗಿ ಕಾಣಿಸಿಕೊಂಡಿದ್ದಾರೆ.

ಭಾರತದ ನಾನ್‌ಸ್ಟಾಪ್ ಮಾತಿನ ಪತ್ರಕರ್ತನ ಪಾತ್ರ ಇದಾಗಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ಸುನೀಲ್ ಪಾತಕಿ ದಾವೂದ್ ಇಬ್ರಾಹಿಂ ಅವರನ್ನು ಸಂದರ್ಶನ ಮಾಡುತ್ತಾರೆ. ಸಿನಿಮಾದಂತೆ ನಿಜ ಜೀವನದಲ್ಲೂ ದಾವೂದ್‌ನನ್ನು ಸಂದರ್ಶಿಸಲು ಹತ್ತಾರು ಪ್ರಶ್ನೆಗಳನ್ನು ಸುನೀಲ್ ರೆಡಿಮಾಡಿಕೊಂಡಿದ್ದಾರೆ. ಮೋದಿ ಅವರಿಂದ ಒಪ್ಪಿಗೆ ಸಿಕ್ಕರೆ ಸಂದರ್ಶನ ಮಾಡ್ತಾರಂತೆ.