Asianet Suvarna News Asianet Suvarna News

ತಮಿಳುನಾಡಿನಲ್ಲೇ ರದ್ದಾದ ಬಾಹುಬಲಿ 2ರ ಮೊದಲ ಶೋ!

ಇಡೀ ದೇಶವೇ ಬಾಹುಬಲಿ 2 ಸಿನಿಮಾದ ಮೊದಲ ಶೋ ನೋಡಲು ಕಾತುರದಿಂದ ಕಾಯುತ್ತಿದ್ದರೆ, ಇತ್ತ ತಮಿಳುನಾಡಿನ ಪ್ರೇಕ್ಷಕರು ಮಾತ್ರ ತುಸು ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಹಣಕಾಸು ವಿಚಾರವಾಗಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ 2-: ದ ಕನ್ಕ್ಲೂಜನ್' ಸಿನಿಮಾದ ಬೆಳಗ್ಗಿನ ಶೋಗಳನ್ನು ತಮಿಳುನಾಡಿನಲ್ಲಿ ರದ್ದು ಮಾಡಲಾಗಿತ್ತು ಎಂಬ ವಿಚಾರ ತಿಳಿದು ಬಂದಿದೆ.

the first show of bahubali 2 canceled in tamil nadu
  • Facebook
  • Twitter
  • Whatsapp

ಚೆನ್ನೈ(ಎ.28): ಇಡೀ ದೇಶವೇ ಬಾಹುಬಲಿ 2 ಸಿನಿಮಾದ ಮೊದಲ ಶೋ ನೋಡಲು ಕಾತುರದಿಂದ ಕಾಯುತ್ತಿದ್ದರೆ, ಇತ್ತ ತಮಿಳುನಾಡಿನ ಪ್ರೇಕ್ಷಕರು ಮಾತ್ರ ತುಸು ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಹಣಕಾಸು ವಿಚಾರವಾಗಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ 2-: ದ ಕನ್ಕ್ಲೂಜನ್' ಸಿನಿಮಾದ ಬೆಳಗ್ಗಿನ ಶೋಗಳನ್ನು ತಮಿಳುನಾಡಿನಲ್ಲಿ ರದ್ದು ಮಾಡಲಾಗಿತ್ತು ಎಂಬ ವಿಚಾರ ತಿಳಿದು ಬಂದಿದೆ.

ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬಾಹುಬಲಿ 2 ಸಿನಿಮಾದ ನಿರ್ಮಾಪಕ ಮಂಡಳಿ ಹಾಗೂ ವಿತರಕರ ನಡುವೆ ಏರ್ಪಟ್ಟ ಮನಸ್ತಾಪದಿಂದಾಗಿ ಸಿನಿಮಾ ರದ್ದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ ತಮಿಳುನಾಡಿನಲ್ಲಿ ಸಿನಿಮಾದ ತೆಲುಗು ಹಾಗೂ ತಮಿಳು ಆವೃತ್ತಿ ಬಿಡುಗಡೆಯಾಗಿಲ್ಲ.

ಥಿಯೇಟರ್ ಮಾಲಿಕರೊಬ್ಬರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, 'ಈ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಸಲಾಗುತ್ತಿದೆ. ಮಧ್ಯಾಹ್ನದೊಳಗೆ ಸಿನಿಮಾದ ತೆಲುಗು ಹಾಗೂ ತಮಿಳು ಆವೃತ್ತಿಗಳು ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ' ಎಂದು ತಿಳಿಸಿದ್ದಾರೆ. ಸಿನಿಮಾದ ಹಿಂದಿ ಆವೃತ್ತಿ ಮಾತ್ರ ಈಗಾಗಲೇ ಬಿಡುಗಡೆಗೊಂಡಿದೆ.

ಕೃಪೆ: NDTv

Follow Us:
Download App:
  • android
  • ios