ಸಾಹೋ ಸಿನಿಮಾದ ಮೇಜರ್ ಫೈಟಿಂಗ್ ಸಿಕ್ವೇನ್ಸ್'ನಲ್ಲಿ ಇರೋ ಕಾರಣ, ತಮ್ಮಿಂದ ಶೂಟಿಂಗ್'ಗೆ ತೊಂದರೆ ಆಗಬಾರದೆಂದು ಹೊಸವರ್ಷದ  ದಿನ ಅಮೆರಿಕಗೆ ಪ್ರಭಾಸ್ ಪ್ರಯಾಣ ಬೆಳಸಿದ್ದಾರೆ.

ಕಟ್ಟುಮಸ್ತಾದ ದೇಹ, ಆರುವರೇ ಅಡಿ ಎತ್ತರ, ತನ್ನ ರೆಬಲ್ ಲುಕ್ ನಿಂದಲೇ ಕೋಟ್ಯಂತರ ಅಭಿಮಾನಿಗಳ ಹಾಟ್ ಫೇವರೆಟ್ ಆಗಿರುವ ನಟ ಪ್ರಭಾಸ್. ಬಾಹುಬಲಿ ಸಿನಿಮಾ ಮೂಲಕ ಟಾಲಿವುಡ್ ಅಲ್ಲದೆ ವಿಶ್ವಾದ್ಯಂತ ಗಮನ ಸೆಳೆದ ಈ ನಟನಿಗೆ ಸಂಕಟವೊಂದು ಎದುರಾಗಿದೆ.

ಬಾಹುಬಲಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ತಮ್ಮ ಎಡ ಭುಜಕ್ಕೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ಈಗ ಆ ನೋವು ಸಾಹೋ ಸಿನಿಮಾ ಶೂಟಿಂಗ್ ನಲ್ಲಿ ಮರುಕಳಿಸಿದೆ. ಸಾಹೋ ಸಿನಿಮಾದ ಮೇಜರ್ ಫೈಟಿಂಗ್ ಸಿಕ್ವೇನ್ಸ್'ನಲ್ಲಿ ಇರೋ ಕಾರಣ, ತಮ್ಮಿಂದ ಶೂಟಿಂಗ್'ಗೆ ತೊಂದರೆ ಆಗಬಾರದೆಂದು ಹೊಸವರ್ಷದ ದಿನ ಅಮೆರಿಕಗೆ ಪ್ರಭಾಸ್ ಪ್ರಯಾಣ ಬೆಳಸಿದ್ದಾರೆ. ಸದ್ಯಕ್ಕೆ ಅಮೆರಿಕಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗಾಗಿ ಅಡ್ಮಿಟ್ ಆಗಿದ್ದಾರೆ ಎನ್ನಲಾಗುತ್ತಿವೆ ಟಾಲಿವುಡ್ ವರದಿಗಳು.