ತೆಲುಗು ಖ್ಯಾತ ನಟ ಹಾಗೂ ಹಿರಿಯ ರಾಜಕಾರಣಿ ಮೋಹನ್ ಬಾಬು ಸಿನಿಮಾ ನಿರ್ಮಾಣಕ್ಕೆ ನೀಡಿದ ಚೆಕ್ ವಿಚಾರದಲ್ಲಿ ಮೋಸ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು.

2009ರಲ್ಲಿ ಮೋಹನ ಬಾಬು ನಿರ್ಮಾಣದ 'ಸಲೀಂ ' ಚಿತ್ರದಲ್ಲಿ ಪುತ್ರ ಮಂಚು ವಿಷ್ಣು ನಟಿಸಿದ್ದು , ಸಿನಿಮಾಗೆ ಸಂಬಂಧ ಪಟ್ಟಂತೆ ನೀಡಿದ ಚೆಕ್ ಬೌನ್ಸ್ ಆಗಿದ್ದು ಇದರ ಬಗ್ಗೆ ಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ತೆಲುಗು ಮಾಧ್ಯಮದಲ್ಲಿ ತೋರಿಸಿದ್ದು ಅದನ್ನು ಕಂಡು ಮೋಹನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

'ಈಗಷ್ಟೇ ಟಿ.ವಿ ಮಾಧ್ಯಮದಲ್ಲಿ ಸುಳ್ಳು ಸಿದ್ದಿ ನೋಡಿ ಬೇಸರ ಆಗಿತ್ತು, ಯಾವ ಜೈಲು ಶಿಕ್ಷೆ ಆಗಿಲ್ಲ ನಾನು ಮನೆಯಲ್ಲೇ ಆರಾಮಾಗಿ ಇದ್ದೀನಿ' ಎಂದು ಬರೆದಿದ್ದಾರೆ.