'ಭಾರತೀಯ ಸಿನಿಮಾದ ಮಾಸ್ಟರ್ ಪೀಸ್' ಕಾಂತಾರದ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಮಾತು!
ಕಾಂತಾರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಫೇಮಸ್ ಸ್ಟಾರ್‌ಗಳ ಪಟ್ಟಿಗೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ಪ್ರಭಾಸ್, ಧನುಶ್, ಪೃಥ್ವಿರಾಜ್ ಸುಕುಮಾರನ್ ಚಿತ್ರದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರ ಇಂದಿಗೂ ಬಾಕ್ಸ್‌ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದ್ದು, ಕೋಟಿಗಳ ಲೆಕ್ಕಾಚಾರದಲ್ಲಿ ಕಲೆಕ್ಷನ್ ಮಾಡುತ್ತಿದೆ.
ಬೆಂಗಳೂರು (ಅ.26): ಇನ್ನು ನಾಲ್ಕು ದಿನ ಕಳೆದರೆ ಕಾಂತಾರ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿ ಒಂದು ತಿಂಗಳಾಗಲಿದೆ. ಆದರೆ, ಈವರೆಗೂ ಚಿತ್ರದ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ವಿವಿಧ ಭಾಷೆಗಳಲ್ಲಿ ಚಿತ್ರ ವೀಕ್ಷಣೆ ಮಾಡುತ್ತಿರುವ ಆಯಾ ರಾಜ್ಯದವರು ಚಿತ್ರದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಈಗಾಗಲೇ ತೆಲುಗು ಚಿತ್ರರಂಗದ ರೆಬಲ್ ಸ್ಟಾರ್ ಪ್ರಭಾಸ್, ತಮಿಳಿನ ಖ್ಯಾತ ನಟ ಧನುಶ್, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಕುರಿತಾಗಿ ತಮ್ಮ ಮಾತುಗಳನ್ನು ಹೇಳಿದ್ದಾರೆ. ಈಗ ತಲೈವಾ, ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಚಿತ್ರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಇದು ಭಾರತೀಯ ಸಿನಿಮಾದ ಮಾಸ್ಟರ್‌ಪೀಸ್ ಎಂದಿದ್ದಾರೆ. ಚಿತ್ರ ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿಗೆ ಹ್ಯಾಟ್ಸ್‌ಆಫ್ ಎಂದಿರುವ ಅವರು, ನೀವು ನನ್ನ ಮೈನವಿರೇಳಿಸುವಂತೆ ಮಾಡಿದ್ದೀರಿ ಎಂದು ಹೇಳಿದ್ದಾರೆ. ಬುಧವಾರ ಈ ಕುರಿತಾfಇ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಟ್ವೀಟ್‌ಗೂ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು, ಈಗಾಗಲೇ 50 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇನ್ನು ರಜನಿಕಾಂತ್ ಅವರ ಟ್ವೀಟ್‌ಗೆ ಸ್ವತಃ ರಿಷಬ್ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
'ನಾವು ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚಿದೆ' ಹೊಂಬಾಳೆ ಫಿಲ್ಮ್ಸ್‌ನ ಕಾಂತರ ಚಿತ್ರಕ್ಕಿಂತ ಅದ್ಬುತವಾಗಿ ಇದನ್ನು ಯಾರೂ ಹೇಳಿರಲಿಲ್ಲ. ರಿಷಭ್ ಶೆಟ್ಟಿ ನೀವು ನನಗೆ ಮೈನವಿರೇಳಿಸುವಂಥ ಚಿತ್ರ ನೀಡಿದ್ದೀರಿ. ರಿಷಬ್ ಒಬ್ಬ ರೈಟರ್, ನಟ ಹಾಗೂ ನಿರ್ದೇಶಕರಾಗಿ ನಾನು ನಿಮಗೆ ಹ್ಯಾಟ್ಸ್‌ಆಫ್ ಹೇಳುತ್ತಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಇರುವ ಮಾಸ್ಟರ್‌ಪೀಸ್ ಇದರ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಅಭಿನಂದನೆಗಳು' ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
ಕಾಂತಾರ ಚಿತ್ರ ವಿವಾದ: ನಟ ಚೇತನ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ
ನಿರೀಕ್ಷೆಯಂತೆಯೇ ರಿಷಭ್ ಶೆಟ್ಟಿ ಕೂಡ ರಜನಿಕಾಂತ್ ಅವರ ಪ್ರತಿಕ್ರಿಯೆಯಿಂದ ಆಕಾಶದಲ್ಲಿ ತೇಲುತ್ತಿದ್ದಾರೆ. ' ಪ್ರೀತಿಯ ರಜನಿಕಾಂತ್ ಸರ್. ನೀವು ಭಾರತ ಕಂಡ ಅತೀದೊಡ್ಡ ಸೂಪರ್ ಸ್ಟಾರ್. ಬಾಲ್ಯದಿಂದಲೂ ನಾನು ನಿಮ್ಮ ಅಭಿಮಾನಿ. ನಿಮ್ಮ ಈ ಮೆಚ್ಚುಗೆಯ ಮಾತುಗಳು ನನ್ನ ಕನಸನ್ನು ನನಸು ಮಾಡಿದೆ. ಸ್ಥಳೀಯವಾದಂಥ ಕಥೆಗಳನ್ನು ಮಾಡಲು ನೀವೇ ನನಗೆ ಸ್ಪೂರ್ತಿ. ನನ್ನೊಂದಿಗೆ ಇಡೀ ಪ್ರೇಕ್ಷಕರ ವರ್ಗಕ್ಕೂ ನೀವು ಆದರ್ಶ. ಥ್ಯಾಂಕ್ ಯು ಸರ್' ಎಂದು ಅವರ ಟ್ವೀಟ್‌ಗೆ ರಿಪ್ಲೈ ಮಾಡಿದ್ದಾರೆ. ಇನ್ನು ಬಾಲಿವುಡ್ ನಟಿ ಕಂಗನಾ ರಾಣಾವತ್, ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಈ ಚಿತ್ರವನ್ನು ಮೆಚ್ಚಿದ್ದಾರೆ. ಮಂಗಳೂರು ಮೂಲದ ನಟಿ ಪೂಜಾ ಹೆಗ್ದೆ ಕೂಡ ಚಿತ್ರದ ಕೊನೆಯ 20 ನಿಮಿಷಗಳನ್ನು ನೋಡಿ ಥ್ರಿಲ್ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
'ಸುಂದರವಾದ ಸೋಜಿಗವೆಲ್ಲ ಕಣ್ಣ ಮುಂದೆ ಇದೆ...' ಮಗಳೊಂದಿಗೆ ಕಾಂತಾರದ 'ಶಿವ'ನ ಸಲಿಗೆ!
200 ಕೋಟಿಯ ಕ್ಲಬ್ ಸೇರಿದ ಕಾಂತಾರ: ಕಾಂತಾರ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್‌ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ. ಇತ್ತೀಚೆಗಷ್ಟೇ ಚಿತ್ರ ವಿಶ್ವದಾದ್ಯಂತ ಗಳಿಕೆಯಲ್ಲಿ 200 ಕೋಟಿಯ ಕ್ಲಬ್‌ಗೆ ಸೇರಿದೆ. ಕಾಂತಾರ ಕಳೆದ ತಿಂಗಳು ಬಿಡುಗಡೆಯಾದಾಗಿನಿಂದ ಸಾರ್ವತ್ರಿಕ ಮೆಚ್ಚುಗೆಯನ್ನು ಗಳಿಸಿದೆ ಮತ್ತು ಪ್ರಸ್ತುತ ಐಎಂಡಿಬಿ ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ. ಅದಲ್ಲದೆ, ಬುಕ್‌ಮೈ ಶೋ ವೆಬ್‌ಸೈಟ್‌ನಲ್ಲಿ 1 ಲಕ್ಷಕ್ಕೂ ಅಧಿಕ ರಿವೀವ್‌ಗಳ ಬಳಿಕವೂ 9.9 ರೇಟಿಂಗ್‌ಅನ್ನು ಚಿತ್ರ ಉಳಿಸಿಕೊಂಡಿದೆ.
ಅದಲ್ಲದೆ, ಈವರೆಗೂ 200 ಕೋಟಿಯ ಕ್ಲಬ್ ಸೇರಿದ ಕೇವಲ ಮೂರನೇ ಕನ್ನಡ ಚಿತ್ರ ಇದಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ಚಿತ್ರದ ಫೂಟ್‌ಫಾಲ್ (ಚಿತ್ರ ಮಂದಿರಕ್ಕೆ ಬಂದಿರುವ ಪ್ರೇಕ್ಷಕರ ಸಂಖ್ಯೆ) ಗಮನಸೆಳೆದಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಚಿತ್ರವನ್ನು ಗರಿಷ್ಠ ಸಂಖ್ಯೆಯ ಪ್ರೇಕ್ಷಕರು ನೋಡಿರುವ ದಾಖಲೆ ಕಾಂತಾರಕ್ಕೆ ಸೇರಿದೆ. ಈ ಹಾದಿಯಲ್ಲಿ ಕೆಜಿಎಫ್‌ನ ದಾಖಲೆಯನ್ನು ಈ ಚಿತ್ರ ಮುರಿದೆ. ಎರಡು ದಿನಗಳ ಹಿಂದೆ ಅಂದಾಜು 77 ಲಕ್ಷ ಮಂದಿ ಕರ್ನಾಟಕದಲ್ಲಿ ಈ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ.