'ಸುಂದರವಾದ ಸೋಜಿಗವೆಲ್ಲ ಕಣ್ಣ ಮುಂದೆ ಇದೆ...' ಮಗಳೊಂದಿಗೆ ಕಾಂತಾರದ 'ಶಿವ'ನ ಸಲಿಗೆ!

ಕಾಂತಾರದ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಯಶಸ್ಸಿನ ಜೋಶ್‌ನಲ್ಲಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್‌ಗೂ ಮುನ್ನ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವ ಯೋಚನೆಯಲ್ಲಿರುವ ರಿಷಬ್‌, ಮಗಳು ರಾಧ್ಯಾ ಜೊತೆಗಿನ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
 

kantara movie director rishab shetty Shares Daughter Raadya Photo san

ಬೆಂಗಳೂರು (ಅ.20): ಸುಂದರವಾದ ಸೋಜಿಗವೆಲ್ಲ ಕಣ್ಣ ಮುಂದೆ ಇದೆ.. ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡಿನಲ್ಲಿ ಬರುವ ಈ ಸಾಲಿನಂತೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಕೂಡ ತಮ್ಮ ಎದುರಿನ ಸೋಜಿಗವನ್ನು ಕಣ್ಣಾರೆ ನೋಡುತ್ತಿದ್ದಾರೆ. ಕನ್ನಡ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದ ಕಾಂತಾರ ಚಿತ್ರ ಇಂದು ದೇಶದ ಬಹುತೇಕ ಭಾಷೆಗಳಲ್ಲಿ ಡಬ್ಬಿಂಗ್‌ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ನೋಡಿದವರೆಲ್ಲರೂ ರಿಷಬ್‌ ಶೆಟ್ಟಿ ನಟನೆ ಹಾಗೂ ಕ್ಲೈಮ್ಯಾಕ್ಸ್‌ಅನ್ನು ವಿಶೇಷವಾಗಿ ಪ್ರಶಂಸೆ ಮಾಡಿದ್ದಾರೆ. ಇವೆಲ್ಲವೂ ಸಮಾಧಾನದಿಂದಲೇ ಸ್ವೀಕಾರ ಮಾಡಿರುವ ರಿಷಬ್‌ ಶೆಟ್ಟಿ ಕೂಡ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ಡಬ್ಬಿಂಗ್‌ ಆದಾಗ ಆಯಾ ಭಾಷೆಯಲ್ಲಿ ಪ್ರಚಾರವನ್ನೂ ಮಾಡಿದ್ದಾರೆ. ಚಿತ್ರವನ್ನು ನಿರ್ದೇಶಿಸಿದ ರಿಷಬ್‌ ಶೆಟ್ಟಿಗೆ ಈ ಚಿತ್ರ ಎಷ್ಟು ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆಯೋ, ಅಷ್ಟೇ ದೊಡ್ಡ ಹೆಸರನ್ನು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ಗೂ ತಂದುಕೊಟ್ಟಿದೆ. ಅಷ್ಟರ ಮಟ್ಟಿಗೆ ಕಾಂತಾರ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರ ಪ್ರಖ್ಯಾತಿಯನ್ನು ಏರಿಸಿದೆ. ಇವೆಲ್ಲದರ ನಡುವೆ ರಿಷಬ್‌ ಶೆಟ್ಟಿಯ ಮುಂದೆ ದೊಡ್ಡ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ಈ ಬಾರಿ 'ನೋ ಕಾಮೆಂಟ್ಸ್‌' ಅನ್ನೋ ಹಾಗಿಲ್ಲ. ಆ ಪ್ರಶ್ನೆ ಯಾವುದೆಂದರೆ 'ಮುಂದೇನು?' ಅನ್ನೋದು..!


ಆದರೆ, ರಿಷಬ್‌ ಶೆಟ್ಟಿ ಈಗಾಗಲೇ ಅದಕ್ಕೆ ಉತ್ತರವನ್ನು ನೀಡಿದ್ದಾರೆ. ಕಾಂತಾರದ ಕ್ರೇಜ್‌ ಇನ್ನೂ ಜನರ ಮನದಲ್ಲಿದೆ. ಮುಂದಿನ ಒಂದಷ್ಟು ದಿನ ಅದರ ಕ್ರೇಜ್‌ನಲ್ಲಿ ಕಳೆದು, ವಿಶ್ರಾಂತಿಯ ಯೋಚನೆಯಲ್ಲಿದ್ದಾರೆ. ವಿಶ್ರಾಂತಿಯ ಸಮಯದಲ್ಲಿ ಏನು ಮಾಡೋದು ಅನ್ನೋದು ಅವರಿಗೆ ಗೊತ್ತಿದೆ. 2017ರಲ್ಲಿ ರಿಷಬ್‌ ಶೆಟ್ಟಿ, ಪ್ರಗತಿ ಶೆಟ್ಟಿಯನ್ನು ವಿವಾಹವಾಗಿದ್ದು 2019ರಲ್ಲಿ ರಣ್ವಿತ್‌ ಶೆಟ್ಟಿ ಹೆಸರಿನ ಪುತ್ರನಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿದ್ದರು. ಕಾಂತಾರ ಚಿತ್ರದ ಸಮಯದಲ್ಲಿಯೇ ಅವರ ಪತ್ನಿ ಪ್ರಗತಿ ಶೆಟ್ಟಿ (Pragati Shetty) 2ನೇ ಬಾರಿಗೆ ಗರ್ಭಿಣಿಯಾಗಿದ್ದರು. ಕಳೆದ ಮಾರ್ಚ್‌ನಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ರಾಧ್ಯಾ ಎನ್ನುವ ಚಂದನೆಯ ಹೆಸರು ಕೂಡ ನೀಡಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆ "ನಾನು ನನ್ನ ಮಗಳು' #Raadya' ಎಂದು ಮಗಳ ಜೊತೆಗಿರುವ ಚಿತ್ರವನ್ನು ಸೋಷಿಯಲ್‌ ಮೀಡಿಯಾ (Social Media) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಕಾಂತಾರ ನಟಿಗೆ ಫುಲ್ ಡಿಮ್ಯಾಂಡ್: ಸಪ್ತಮಿ ಗೌಡಗೆ ಅವಕಾಶಗಳ ಮಹಾಪೂರ

ರಿಷಭ್‌ ಶೆಟ್ಟಿ (Rishab Shetty) ಅವರ ಈ ಚಿತ್ರಕ್ಕೆ ಸಾಕಷ್ಟು ಕಾಮೆಂಟ್‌, ಲೈಕ್ಸ್‌ಗಳು ಬಂದಿವೆ. ಟ್ವಿಟರ್‌ನಲ್ಲಿ ಈ ಚಿತ್ರ 1949 ಬಾರಿ ರೀ ಟ್ವೀಟ್‌ ಆಗಿದ್ದರೆ, 34 ಬಾರಿ ಕೋಟ್‌ ಟ್ವೀಟ್‌ ಆಗಿದೆ. ಇನ್ನು 33 ಸಾವಿರಕ್ಕೂ ಅಧಿಕ ಜನ ಇದನ್ನು ಲೈಕ್‌ ಮಾಡಿದ್ದಾರೆ. 'ಶೆಟ್ರೆ ಮಗಳು ಹುಟ್ಟಿದ ಮೇಲೆಯೇ ನಿಮಗೆ ದೊಡ್ಡ ಯಶಸ್ಸು ಸಿಕ್ಕಿದೆ' ಎಂದು ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ಕಾಂತಾರ ಚಿತ್ರ ವಿವಾದ: ನಟ ಚೇತನ್‌ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ

ಕಾಂತಾರ-2 ಯಾವಾಗ: ಕಾಂತಾರ (Kantara-2) ಚಿತ್ರ ದೊಡ್ಡ ಯಶಸ್ಸು ಕಂಡ ಬಳಿಕ, ಕಾಂತಾರ-2 ಚಿತ್ರ ಯಾವಾಗ ಎನ್ನುವ ಪ್ರಶ್ನೆ ಎಲ್ಲರಲ್ಲಿ ಉದ್ಭವವಾಗಿದೆ. ಹಿಂದಿಯಲ್ಲಿ (Kantara Hindi) ಚಿತ್ರದ ಪ್ರಚಾರದ ವೇಳೆ ಅವರಿಗೆ ಇದೇ ಪ್ರಶ್ನೆ ಹಲವು ಬಾರಿ ಎದುರಾಗಿದೆ. 'ಸಿನಿಮಾ ಮಾಡುವಾಗ ಅಂತಹ ಪ್ಲಾನ್ ಮಾಡಿರಲಿಲ್ಲ. ಆದರೆ ಈ ವಿಚಾರಕ್ಕೆ ವಿರೋಧವಿಲ್ಲ ಎಂದಿದ್ದಾರೆ. ಆ ಮೂಲಕ ಕಾಂತಾರ ಚಿತ್ರದ ಮತ್ತೊಂದು ಆವೃತ್ಯಿ ಬರಬಹುದು ಎನ್ನುವ ಸೂಚನೆಯನ್ನೂ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಕನ್ನಡದ ತಾರೆ ಬ್ರಹ್ಮಾಂಡವನ್ನು ವಿಸ್ತರಿಸಲು ಅನ್ವೇಷಿಸಬಹುದಾದ ಅನೇಕ ಉಪಕಥೆಗಳಿವೆ ಎಂದು ಹೇಳಿದರು. ಕಥೆಯ ಪೂರ್ವಭಾಗವು ಚಿತ್ರವನ್ನು ಫ್ರಾಂಚೈಸಿಯನ್ನಾಗಿ ಮಾಡಲು ಸಹ ಸಾಧ್ಯವಿದೆ ಎಂದು ಅವರು ಬಹಿರಂಗಪಡಿಸಿದರು.

 

Latest Videos
Follow Us:
Download App:
  • android
  • ios