ತಮಿಳಿನ ಸೂಪರ್‌ಹಿಟ್ ಚಿತ್ರ ‘96' ಕನ್ನಡಕ್ಕೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Dec 2018, 1:05 PM IST
Tamil super hit movie 96 will come to Kannada
Highlights

ತಮಿಳು ಸೂಪರ್ ಹಿಟ್ ಮೂವಿ 96 ಕನ್ನಡಕ್ಕೆ |  ಪ್ರೀತಂ ಗುಬ್ಬಿ- ಗಣೇಶ್ ಕಾಂಬಿನೇಶನ್‌ನಲ್ಲಿ ಮೂಡಿ ಬರಲಿದೆ 96 

ಬೆಂಗಳೂರು (ಡಿ. 05): ತಮಿಳಿನ ಸೂಪರ್‌ಹಿಟ್ ಚಿತ್ರ ‘96’ ಕನ್ನಡಕ್ಕೆ ಬರುತ್ತಿದೆ. ನಿರ್ಮಾಪಕ ರಾಮು ಆ ಚಿತ್ರದ ರಿಮೇಕ್ ಹಕ್ಕು ಪಡೆದಿದ್ದು, ಪ್ರೀತಂ ಗುಬ್ಬಿ ನಿರ್ದೇಶನದೊಂದಿಗೆ ಅದು ‘99’ ಹೆಸರಲ್ಲಿ ಕನ್ನಡೀಕರಣಗೊಳ್ಳುತ್ತಿದೆ. ಮೂಲ ಚಿತ್ರದಲ್ಲಿ ವಿಜಯ ಸೇತುಪತಿ ನಿರ್ವಹಿಸಿದ್ದ ಪಾತ್ರಕ್ಕೆ ಗಣೇಶ್ ಬಣ್ಣ ಹಚ್ಚುತ್ತಿದ್ದಾರೆ. 

ಆ ಮೂಲಕ ಮತ್ತೊಮ್ಮೆ ಪ್ರೀತಂ ಗುಬ್ಬಿ ಮತ್ತು ಗಣೇಶ್ ಒಂದಾಗುತ್ತಿರುವುದು ವಿಶೇಷ. ಮಧುರವಾದ ಪ್ರೇಮಕತೆ ಹೊಂದಿರುವ ‘96’ ತಮಿಳಿನ ಬ್ಲಾಕ್‌ಬಸ್ಟರ್ ಚಿತ್ರ. ವಿಜಯ್ ಸೇತುಪತಿ ಮತ್ತು ತ್ರಿಷಾ ನಟನೆಯ ಈ ಚಿತ್ರ ಹೊಸ ಥರದ ಕ್ರೇಜ್ ಸೃಷ್ಟಿಸಿತ್ತು. ಇದೀಗ ಆ ಚಿತ್ರವನ್ನು ಪ್ರೀತಂ ಗುಬ್ಬಿ ರಿಮೇಕ್ ಮಾಡುತ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 

loader