ಸದ್ಗುರು ಭೇಟಿ ವೇಳೆ ಹೂವಿನ ಪ್ರಿಂಟ್ ಸೀರೆಯಲ್ಲಿ ಮಿಂಚಿದ ತಮನ್ನಾ; 'ವಯಸ್ಸಾಗುವ ಬಗ್ಗೆ ನಮಗೇಕೆ ಭಯ?' ಎಂದು ಕೇಳಿದ ನಟಿಗೆ ಸದ್ಗುರು ಕೊಟ್ಟ ಉತ್ತರ ಏನು ಗೊತ್ತಾ?
ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಸರಳ ಮತ್ತು ಆಕರ್ಷಕ ಉಡುಗೆಗಳಿಂದ ತಮ್ಮ ಅಭಿಮಾನಿಗಳ ಗಮನವನ್ನು ಸೆಳೆಯುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಈ ವೇಳೆ ಅವರು ಗುಲಾಬಿ ಬಣ್ಣದ ಸಿಂಪಲ್ ಸೀರೆಯಲ್ಲಿ ಮಿಂಚಿದರು. ಈ ವೇಳೆ ಅವರು ಸದ್ಗುರು ಜೊತೆ ನಡೆಸಿದ ಮಾತುಕತೆಯೂ ಕೂಡ ಸಾಕಷ್ಟು ಚರ್ಚೆ ಆಯಿತು.
ಏನು ಕಾರ್ಯಕ್ರಮ?
ಮುಂಬೈನ ಫೇರ್ಮಾಂಟ್ ಹೋಟೆಲ್ನಲ್ಲಿ ನವೆಂಬರ್ 22 ರಂದು ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸದ್ಗುರು Disappearing Faces ಎಂಬ ಫೋಟೋ ಪುಸ್ತಕದ ಕುರಿತ ಚರ್ಚಾ ಕಾರ್ಯಕ್ರಮ ಅದಾಗಿತ್ತು. ಈ ವೇಳೆ ಆಗಮಿಸಿದ್ದ ತಮನ್ನಾ ತಿಳಿ ಗುಲಾಬಿ ಬಣ್ಣದ ಸೇರೆ ಧಟ್ಟಿದ್ದರು. ಅದು ಇಟಾಲಿಯನ್ ಪ್ಯೂರ್ ಸಿಲ್ಕ್ ಆರ್ಗಾಂಜಾ ಬಟ್ಟೆಯಿಂದ ತಯಾರು ಮಾಡಲಾಗಿತ್ತು.
Picchika ಬ್ರಾಂಡ್ನ ಈ ಸೀರೆಯ ಬಲೆ 65 ಸಾವಿರ ರೂಪಾಯಿ. ಸೀರೆಯ ಮೇಲೆ ಕೈಯಿಂದ ಬಿಡಿಸಿದ ಗುಲಾಬಿ ಲಿಲ್ಲಿ ಮತ್ತು ಬಿಳಿ ಪಾರಿಜಾತ ಹೂವುಗಳ ಚಿತ್ರಗಳಿದ್ದವು. ಇನ್ನು ಈ ಹೂವುಗಳಿಗೆ ಕುಸುರಿ ಮತ್ತು ಚಿನ್ನದ ಬಣ್ಣದ ಗೋಟಾ ವರ್ಕ್ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಕೋಟಾ ಸಿಲ್ಕ್ ದುಪ್ಪಟ್ಟಾ ಕೂಡ ಇತ್ತು. ಇನ್ನೊಂದು ವಿಶೇಷ ಅಂದರೆ ಕೈಯಿಂದ ಮಾಡಲಾಗಿದ್ದ ಹೂವಿನ ಪ್ರತಿಯೊಂದು ವಿನ್ಯಾಸವೂ ತುಂಬಾ ವಿಭಿನ್ನವಾಗಿತ್ತು. ಈ ಸೀರೆಗೆ ಮ್ಯಾಚಿಂಗ್ ಆಗಿ ತಮನ್ನಾ ಫೈನ್ ಜ್ಯುವೆಲರಿ ಬ್ರ್ಯಾಂಡ್ನ ನೆಕ್ಲೇಸ್, ಕಿವಿಯೋಲೆ ಮತ್ತು ಚಿನ್ನದ ಬಳೆಗಳನ್ನು ಧರಿಸಿದ್ದರು. ತಿಳಿ ಗುಲಾಬಿ ಬಣ್ಣದ ಮೇಕಪ್ ಮತ್ತು ಹಣೆಗೆ ಕೆಂಪು ಬಿಂದಿ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು.
ಸದ್ಗುರು ಜೊತೆ ಏನು ಮಾತುಕತೆ ನಡೆಯಿತು?
ಸದ್ಗುರು ಅವರ ಫೋಟೋಗಳನ್ನ ತಮನ್ನಾ ನೋಡಿದರು. ನಂತರ ಸದ್ಗುರುಗಳಿಗೆ ಪ್ರಶ್ನೆಗಳನ್ನ ಮಾಡಿದರು. ದಿನಗಳು ಉರುಳಿದಂತೆ ವಯಸ್ಸಾಗುವುದು ಅನಿವಾರ್ಯ. ನಾವು ಅದನ್ನು ಯಾಕೆ ಒಪ್ಪಿಕೊಳ್ಳುವುದಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸದ್ಗುರು, ಹಿಂದೆ ವಯಸ್ಸಾಗುವುದನ್ನ ಸಹಜವಾಗಿ ಮತ್ತು ಗೌರವದಿಂದ ಸ್ವೀಕರಿಸುತ್ತಿದ್ದರು. ಇಂದು ಯೌವನ ಮತ್ತು ದೈಹಿಕ ಸೌಂದರ್ಯದ ಬಗ್ಗೆ ಅತಿಯಾದ ವ್ಯಾಮೋಹ ಇದೆ. ಮುಂದೊಂದು ದಿನ ಅದು ಸಮತೋಲನ ತಪ್ಪಲಿದೆ ಎಂದರು.
ಆಗ ತಮನ್ನಾ ವಯಸ್ಸಾದಂತೆ ನಾವು ಹೇಗೆ ಕಾಣುತ್ತೇವೆ ಅನ್ನೋದು ಅನುವಂಶಿಕವೇ, ಇಲ್ಲ ಬದುಕಿನ ರೀತಿಯಿಂದ ಬರುತ್ತದೆಯಾ ಎಂದು ಕೇಳುತ್ತಾರೆ. ದೈಹಿಕ ಲಕ್ಷಣಗಳಲ್ಲಿ ಅನುವಂಶಿಕತೆಯ ಪಾತ್ರ ಇರುತ್ತದೆ. ಅಷ್ಟೇ ಅಲ್ಲ ನಮ್ಮ ಒಳಗಿನ ಮನಸ್ಥಿತಿಯೂ ತುಂಬಾನೇ ಮುಖ್ಯ. ಸಂತೋಷದಿಂದ ಇರುವ ಮುಖ ಯಾವಾಗಲು ಸುಂದರವಾಗಿರುತ್ತದೆ ಎಂದಿದ್ದಾರೆ.
ಡಿಸ್ಅಪಿಯರಿಂಗ್ ಫೇಸಸ್ ಸದ್ಗುರು ಬರೆದ ಪುಸ್ತಕ. ಅದು 208 ಪುಟಗಳನ್ನು ಹೊಂದಿದೆ. ಇದನ್ನು ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಎಬರಿ ಪ್ರೆಸ್ ಪ್ರಕಟಿಸಿದೆ. ಈ ಪುಸ್ತಕದಲ್ಲಿ ಸದ್ಗುರು ನಡೆಸಿದ ದಶಕಗಳ ಪ್ರಯಾಣಗಳನ್ನ ಎಂಬುದು ಸದ್ಗುರು ಅವರ 208 ಪುಟಗಳ ಫೋಟೋ ಪುಸ್ತಕವಾಗಿದೆ. ಇದನ್ನು ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾದ 'ಎಬರಿ ಪ್ರೆಸ್' ಪ್ರಕಟಿಸಿದೆ. ನೇಪಾಳ ಮತ್ತು ಟಿಬೆಟ್ ಸೇರಿದಂತೆ ಹಿಮಾಲಯದ ದುರ್ಗಮ ಪ್ರದೇಶಗಳಲ್ಲಿ ಸದ್ಗುರು ನಡೆಸಿದ ಯಾತ್ರೆಗೆ ಸಂಬಂಧಿಸಿದ ಪುಸ್ತಕ. ಆಧುನಿಕತೆ ಮತ್ತು ಶಿಕ್ಷಣದ ಪ್ರಭಾವದಿಂದ ಇಲ್ಲಿನ ಜನರ ಜೀವನಶೈಲಿ ಹೇಗೆ ಬದಲಾಗುತ್ತಿದೆ ಎಂಬುದನ್ನ ಪುಸ್ತಕ ಹೇಳ್ತಿದೆ.












