ನವದೆಹಲಿ (ಅ. 26): ನಟಿ ಸುಶ್ಮಿತಾ ಸೇನ್ ಲವ್ವಲ್ಲಿ ಬಿದ್ದಿದ್ದಾರೆ. ಮಾಡೆಲ್ ರೋಹಮಾನ್ ಶೌಲ್ ಎಂಬುವವರ ಜೊತೆ ಡೇಟಿಂಗ್ ನಡೆಸುತ್ತಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

 

ಈ ಜೋಡಿಗಳು ತಾಜ್ ಮಹಲ್ ಎದುರು ತೆಗೆಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ನನ್ನ ಜೀವನದ ಪ್ರೀತಿ ಇವರು ಎಂದು ಬರೆದುಕೊಂಡಿದ್ದಾರೆ. 

ಕೆಲ ತಿಂಗಳ ಹಿಂದೆ ಫ್ಯಾಷನ್ ಶೋ ಒಂದರಲ್ಲಿ ಸುಶ್ಮಿತಾ ಹಾಗೂ ರೋಹಮಾನ್ ಭೇಟಿಯಾಗಿದ್ದರು. ಆಗ ಅವರಿಬ್ಬರ ನಡುವೆ ಕುಚ್ ಕುಚ್ ಶುರುವಾಗಿ ಅಲ್ಲಿಂದ ಸಂಬಂಧದಲ್ಲಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. 

ರೋಹಮಾನ್ ಜೊತೆ ಡೇಟಿಂಗ್ ನಡೆಸೋಕೂ ಮುನ್ನ ಸುಶ್ಮಿತಾ ರಿತಿಕ್ ಭಾಸಿನ್ ಎನ್ನುವವರೊಡನೆ ಡೇಟಿಂಗ್ ನಡೆಸುತ್ತಿದ್ದರು. ಅದು ಹೆಚ್ಚು ದಿನ ಬಾಳಲಿಲ್ಲ. ಅವರಿಗೆ ಗುಡ್ ಬೈ ಹೇಳಿ ರೋಹಮಾನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. 

ರೋಹಮಾನ್ ಗೆ ಕೇವಲ 23 ವರ್ಷವಾದರೆ ಸುಶ್ಮಿತಾಗೆ 43 ವರ್ಷ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅನ್ನೋಕೆ ಇದೇ ಸಾಕ್ಷಿ ಅಲ್ವಾ?