ಇತ್ತೀಚಿಗೆ ಅಭಿಮಾನಿಗಳಲ್ಲಿ ಕೆಲವರು ಅಸಭ್ಯ ವರ್ತನೆ ತೋರುತ್ತಿದ್ದಾರೆ.

ಚೆನ್ನೈ(ಮೇ.25): ರಾಜಕೀಯ ಪ್ರವೇಶ ಮಾಡುತ್ತಿರುವ ಸೂಪರ್ ಸ್ಟಾರ್ ರಜಿನಿಕಾಂತ್ ತಮ್ಮ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿಗೆ ಅಭಿಮಾನಿಗಳಲ್ಲಿ ಕೆಲವರು ಅಸಭ್ಯ ವರ್ತನೆ ತೋರುತ್ತಿದ್ದಾರೆ. ಇದಕ್ಕೆ ಕೆಂಡವಾಗಿರುವ ರಜಿನಿ ತಮ್ಮ ಅಖಿಲ ಭಾರತ ರಜನೀಕಾಂತ್ ಅಭಿಮಾನಿಗಳ ಕಲ್ಯಾಣ ಸಂಘದ ಯಾವುದೇ ಸದಸ್ಯರು ಯಾವುದೇ ಸದಸ್ಯರು ಅಶಿಸ್ತು ತೋರಿದರೆ ಅವರನ್ನು ವಜಾ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಂಘಟನೆಯ ಘನತೆಗೆ ಕುಂದು ತಂದವರನ್ನು ಸದಸ್ಯತ್ವದಿಂದ ವಜಾಗೊಳಿಸುವ ಅಧಿಕಾರವನ್ನು ಸಂಘದ ಹಿರಿಯ ಕಾರ್ಯಕರ್ತ ವಿ.ಎಂ. ಸುಧಾಕರ್ ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.