ಶಿಕ್ಷಣ ಇಲಾಖೆ ಜ್ಯೂನಿಯರ್ ಇಂಜಿನಿಯರಿಂಗ್ ಬಿಹಾರ್ ಪರೀಕ್ಷೆ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಟಾಪರ್ ಲಿಸ್ಟ್ ನಲ್ಲಿ ಸನ್ನಿ ಲಿಯೋನ್ ಹೆಸರು ಇದ್ದಿದ್ದನ್ನು ಕಂಡು ಎಲ್ಲರಿಗೂ ಅಚ್ಚರಿ ಉಂಟಾಗಿದೆ.

ಬಿಹಾರ್ PHED ಜೂನಿಯರ್ ಇಂಜಿನಿಯರಿಂಗ್ ಅರ್ಜಿ ತೆರೆಯಲಾಗಿತ್ತು. ಅದರಲ್ಲಿ 17000 ಜನ ಭಾಗಿಯಾಗಿದ್ದು ಅದರಲ್ಲಿ ಸನ್ನಿ ಲಿಯೋನ್ ಹೆಸರು ಇರುವುದನ್ನು ಕಂಡು ಎಲ್ಲರು ಬೆರಗಾಗಿದ್ದಾರೆ.

ಬಿಹಾರ್ ಶಿಕ್ಷಣ ಇಲಾಖೆಯ ಜಂಟಿ ವ್ಯವಸ್ಥಾಪಕ ಅಶೋಕ್ ಕುಮಾರ್ ಹೇಳುವ ಪ್ರಕಾರ ಸನ್ನಿ ಲಿಯೋನ್ ಹೆಸರಿನ ವ್ಯಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅವರ ತಂದೆಯ ಹೆಸರು ಲಿಯೋನ್ ಎಂದು. ಈ ವ್ಯಕ್ತಿ ಶೇ. 98.5 ರಷ್ಟು ಅಂಕ ಪಡೆದಿದ್ದು ಇದರ ವೆರಿಫಿಕೇಷನ್ ಬಂದಾಗ ಹೆಚ್ಚಿನ ಮಾಹಿತಿ ಸಿಗುತ್ತದೆ’ ಎಂದು ಹೇಳಿದ್ದಾರೆ.

ಈ ವಿಚಾರ ಸನ್ನಿ ಲಿಯೋನ್ ಗೆ ತಲುಪಿದ್ದು ‘ಹಹಹಹ...ನನ್ನ ಇನ್ನೊಂದು ವ್ಯಕ್ತಿ ಪಡೆದಿರುವ ಅಂಕ’ ಎಂದು ಟ್ಟೀಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಸನ್ನಿ ಬ್ಯಾಗ್‌ ಸೀಕ್ರೇಟ್ ಬಹಿರಂಗ! ಅಷ್ಟಕ್ಕೂ ಅದರಲ್ಲಿ ಏನಿರುತ್ತೆ?