Asianet Suvarna News Asianet Suvarna News

ಜಾಕಿ ಚಾನ್ ಆದಿಯಾಗಿ ಮಾಜಿ ಪೋರ್ನ್ ಸ್ಟಾರ್'ಗಳ ಪಟ್ಟಿ ಕೊಟ್ಟ ಸನ್ನಿ ಲಿಯೋನೆ

ಸನ್ನಿ ಲಿಯೋನ್ ಈಗ ಬಾಲಿವುಡ್ ನಟಿ. ಆದರೆ, ಯಾರಾದರೂ ಈಕೆಗೆ "ಮಾಜಿ ನೀಲಿತಾರೆ" ಎಂದರೆ ತುಸು ಕೋಪ ಬರುತ್ತದಂತೆ. ಸನ್ನಿ ಪ್ರಕಾರ, ಸಿನಿ ಜಗತ್ತಿನಲ್ಲಿ ಗ್ರೇಟ್ ಎನಿಸಿಕೊಂಡ ಕಲಾವಿದರೂ ಒಂದು ಕಾಲದಲ್ಲಿ ಪೋರ್ನ್ ಸ್ಟಾರ್'ಗಳೇ ಅಂತೆ..! ಈಕೆಯ ಪಟ್ಟಿಯಲ್ಲಿ ಜಾಕಿಚಾನ್, ಆರ್ನಾಲ್ಡ್ ಮೊದಲಾದ ದಿಗ್ಗಜರು ಕೂಡ ಇದ್ದಾರೆ..!​

sunny leone lists ex porn stars who become stars

ಸನ್ನಿ ಲಿಯೋನ್‌ಗೆ ಮಾಜಿ ಪೋರ್ನ್‌ ತಾರೆ ಎಂದರೆ ಕೋಪ ಬರುತ್ತೆ. ಈಗಾಗಲೇ ಹತ್ತಾರು ಹಿಂದಿ ಸಿನಿಮಾ ಮಾಡಿದ ಮೇಲೂ ಬಾಲಿವುಡ್‌ ನಟಿ ಎನ್ನುವ ಬದಲು, ನೀಲಿ ಪರದೆಯ ಹಿನ್ನೆಲೆಯಲ್ಲಿ ತನ್ನನ್ನು ಗುರುತಿಸುತ್ತಿರುವುದು ಆಕೆಗೆ ಇಷ್ಟವಾಗುವುದಿಲ್ಲ. ಪತ್ರಕರ್ತ ಭೂಪೇಂದ್ರ ಚೌಬೇ ನಡೆಸಿಕೊಟ್ಟವಿವಾದಿತ ಸಂದರ್ಶನದಲ್ಲೂ ಸನ್ನಿಯ ಈ ಸಿಟ್ಟಿನ ದರ್ಶನವಾಗಿದ್ದು ಗೊತ್ತೇ ಇದೆ. ‘ನನಗೇಕೆ ನೀವು ನೀಲಿತಾರೆಯ ಹಿನ್ನೆಲೆಯಲ್ಲಿ ಪ್ರಶ್ನೆ ಕೇಳುತ್ತಿದ್ದೀರಿ?' ಎಂದು ಸನ್ನಿ ಮರುಪ್ರಶ್ನೆ ಎಸೆದಿದ್ದಾಗ ಚೌಬೇಯ ಮುಖ ತುಸು ಕೆಂಪೇರಿತ್ತು.

ಎಲ್ಲಿಗೆ ಹೋದರೂ ಅಡ್ಡಿ ಆಗುತ್ತಿರುವ ‘ಮಾಜಿ ನೀಲಿತಾರೆ' ಎನ್ನುವ ಪದಕ್ಕೆ ಪರಿಹಾರ ಹುಡುಕಲು ಸನ್ನಿ ನಿರ್ಧರಿಸಿದ್ದಾರೆ. ಪ್ರಪಂಚದಲ್ಲಿ ತಾನೊಬ್ಬಳೇ ಅಲ್ಲ, ತನ್ನಂತೆ ಹಲವು ತಾರೆಯರು ಪೋರ್ನ್‌ ಜಗತ್ತನ್ನು ಹೊಕ್ಕಿ ಬಂದಿದ್ದಾರೆ ಎನ್ನುವುದು ಸನ್ನಿಯ ಹೊಸ ವಾದವಂತೆ. ನೀಲಿತಾರೆಗಳಾದ ನಂತರವೇ ಸದಭಿರುಚಿಯ ಸಿನಿಮಾಗಳನ್ನು ಒಪ್ಪಿಕೊಂಡು ತಾರೆಗಳಾದವರ ಒಂದು ಪಟ್ಟಿಯೇ ಸನ್ನಿ ಲಿಯೋನ್‌ ಬಳಿಯಿದೆ. ಅವರೆಲ್ಲರು ಕೂಡ ಮಾಜಿ ಪೋರ್ನ್‌ಸ್ಟಾರ್‌ಗಳೇ ಆಗಬೇಕೆಂಬುದು ಈ ನಟಿಯ ವಾದ. ಸನ್ನಿಯ ಆ ಲಿಸ್ಟಿನಲ್ಲಿ ಯಾರಾರ‍ಯರಿದ್ದಾರೆ ಗೊತ್ತಾ?

ಜಾಕೀ ಚಾನ್‌:
ನೀವು ನಂಬುವುದಿಲ್ಲ. ಈಗೇನು ಮಾರ್ಷಿಯಲ್‌ ಆರ್ಟ್‌ ನಿಂದ ವಿಲನ್ನುಗಳನ್ನು ಮಣ್ಣು ಮುಕ್ಕಿಸುತ್ತಿರುವ ಚೀನಾದ ನಟ ಜಾಕೀಚಾನ್‌ ಕೂಡ ಒಂದು ಕಾಲದಲ್ಲಿ ಪೋರ್ನ್‌ ಸ್ಟಾರ್‌! ಅದು ಹೇಗೆ ಎನ್ನುವುದಕ್ಕೆ ಸನ್ನಿಯ ಬಳಿಯೊಂದು ಆಧಾರವಿದೆ. ಇದು ನಿಜ ಕೂಡ. 1975ರಲ್ಲಿ ‘ಆಲ್‌ ಇನ್‌ ದಿ ಫ್ಯಾಮಿಲಿ' ಎಂಬ ಹಾಂಕಾಂಗ್‌ನ ನೀಲಿಚಿತ್ರದಲ್ಲಿ ಜಾಕೀಚಾನ್‌ ಹೀರೋ ಆಗಿ ನಟಿಸಿದ್ದರು. ರಿಕ್ಷಾ ಡ್ರೈವರ್‌, ವಿವಾಹಿತೆಯ ಅಕ್ರಮ ಸಂಬಂಧ ಬೆಳೆಸಿದ ಕತೆ ಅದಾಗಿತ್ತು. ಜಾಕೀ ಅಲ್ಲಿ ನಟಿಸಿದ್ದರೂ, ಅಲ್ಲಾ್ಯವುದೇ ಆ್ಯಕ್ಷನ್‌- ಫೈಟ್‌ ಇರಲಿಲ್ಲ. ಕೇವಲ ಬೆಡ್‌ರೂಮ್‌ ರೊಮ್ಯಾನ್ಸ್‌ ಅಷ್ಟೇ!

ಕ್ಯಾಮೆರಾನ್‌ ಡಯಾಸ್‌:
ಸನ್ನಿ ಪಟ್ಟಿಯ ಇನ್ನೊಂದು ಹೆಸರು, ‘ವೆನಿಲಾ ಸ್ಕೈ' ಖ್ಯಾತಿಯ ಹಾಲಿವುಡ್‌ ನಟಿ ಕ್ಯಾಮೆರಾನ್‌ ಡಯಾಸ್‌! ಈಕೆ ಬಣ್ಣದ ಜಗತ್ತಿನ ತನ್ನ ಕೆರಿಯರ್‌ ಆರಂಭಿಸಿದ್ದೇ ಪೋರ್ನ್‌ ಇಮೇಜ್‌ನಿಂದ. ಕ್ಯಾಮೆರಾನ್‌ ತನ್ನ 19ನೇ ವಯಸ್ಸಿನಲ್ಲಿ ಬೆತ್ತಲೆ ಫೋಟೋಶೂಟ್‌ ಮತ್ತು ವಿಡಿಯೋ ಶೂಟ್‌ ಮಾಡಿಸಿಕೊಂಡಿದ್ದರು. ಈ ಹಾಟ್‌ ಫೋಟೋ, ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ವೈರಲ್‌ ಮಾಡುವುದಾಗಿ ಫೋಟೋಗ್ರಾಫರ್‌ ಬ್ಲ್ಯಾಕ್‌ಮೇಲ್‌ ಮಾಡಿದ್ದ. ಕ್ಯಾಮೆರಾನ್‌ ಕೋರ್ಟಿನ ಮೊರೆ ಹೋಗಿ, ಕೊನೆಗೂ ಆತನಿಗೆ ಜೈಲಿನ ಹಾದಿ ತೋರಿಸಿದ್ದರು.

ಅರ್ನಾಲ್ಡ್‌ ಶ್ವಾರ್ಜಿನೆಗರ್‌:
‘ಟರ್ಮಿನೇಟರ್‌' ನೋಡಿ ಹುಬ್ಬೇರಿಸಿದವರಿಗೆ ಇದೊಂದು ಶಾಕ್‌ ಸುದ್ದಿ. ನಾವು ‘ದಿ ಗ್ರೇಟ್‌' ಎಂದು ಉದ್ಗರಿಸುವ ಅರ್ನಾಲ್ಡ್‌ ಕೂಡ ಒಂದು ಕಾಲದ ಪೋರ್ನ್‌ ಸ್ಟಾರ್‌. ಅದು ಹೇಗೆ ಎನ್ನುವುದಕ್ಕೂ ಸನ್ನಿ ಲಿಯೋನ್‌ ಕೈಯಲ್ಲಿ ಸಾಕ್ಷಿಯಿದೆ. 1977ರಲ್ಲಿ ಗೇ ಮ್ಯಾಗಜಿನ್‌ ‘ಆಫ್ಟರ್‌ ಡಾರ್ಕ್'ಗೆ ಬೆತ್ತಲೆಯಾಗಿ ಫೋಟೋಶೂಟ್‌ ಮಾಡಿಸಿಕೊಂಡಿದ್ದರು. ಮುಖಪುಟ ಚಿತ್ರವಲ್ಲದೆ, ಒಳಗಿನ ‘ಮಸ್ಕಲ್‌ಬೌಂಡ್‌ ಆಫ್‌ ಗ್ಲೋರಿ' ಲೇಖನಕ್ಕೂ ಇವರ ಹಲವು ಚಿತ್ರಗಳನ್ನು ಬಳಸಿಕೊಳ್ಳಲಾಗಿತ್ತು.

ಮರ್ಲಿನ್‌ ಮನ್ರೋ:
ಶತಮಾನದ ಚೆಲುವೆಯೆಂದು ಹಾಲಿವುಡ್‌ ಆರಾಧಿಸು­ತ್ತಿರುವ ಮರ್ಲಿನ್‌ ಮನ್ರೋ ಕೂಡ ಪೋರ್ನ್‌ ಸ್ಟಾರ್‌ ಅಂತೆ. ಕೇವಲ 50 ಡಾಲರ್‌ಗಾಗಿ 1949ರಲ್ಲಿ ‘ಪ್ಲೇಬಾ­ಯ್‌'ಗೆ ಬೆತ್ತಲೆ ಫೋಟೋಶೂಟ್‌ ಮಾಡಿಸಿ­ಕೊಂಡಿದ್ದರು. ಸತತ ನಾಲ್ಕು ವರ್ಷ ಈಕೆಯ ನಗ್ನ ಫೋಟೋ­ಗಳನ್ನು ‘ಪ್ಲೇಬಾಯ್‌' ತನ್ನ ಪ್ರಚಾರಕ್ಕಾಗಿಯೇ ಬಳಸಿಕೊಂಡಿತ್ತು. ಹಾಗಾಗಿ ಮನ್ರೋ ಕೂಡ ಮಾಜಿ ಪೋರ್ನ್‌ ತಾರೆಯೇ ಆಗ್ತಾರೆ ಅನ್ನೋದು ಸನ್ನಿಯ ಅಭಿಪ್ರಾಯ.

ಜಾನ್‌ ಹ್ಯಾಮ್‌:
‘ಮ್ಯಾಡ್‌ಮೆನ್‌' ಖ್ಯಾತಿಯ ಜಾನ್‌ ಹ್ಯಾಮ್‌ ಒಂದು ಕಾಲದಲ್ಲಿ ಕೇವಲ 200 ಡಾಲರ್‌ಗೆ ‘ಸ್ಕಿನೆಮ್ಯಾಕ್ಸ್‌' ಚಾನೆಲ್‌ಗಾಗಿ ನೀಲಿತಾರೆ ಆಗಿದ್ದರು! ಸ್ಕಿನೆಮ್ಯಾಕ್ಸ್‌ ಎನ್ನುವುದು ಬಿಗ್ರೇಡ್‌ ಸಿನಿಮಾ, ಧಾರಾವಾಹಿ, ಶೋಗಳನ್ನೇ ಪ್ರಸಾರ ಮಾಡುವಂಥ ವಾಹಿನಿ. ಸದಭಿರುಚಿಯ ಸಿನಿಮಾಗಳಲ್ಲಿ ಅವಕಾಶ ಸಿಗದೇ ಇದ್ದ ಕಾರಣಕ್ಕೆ ಜಾನ್‌, ಈ ಚಾನೆಲ್‌ನಲ್ಲಿ ಕೆಲ ವರ್ಷ ದುಡಿದಿದ್ದರು. ಬದುಕಿಗಾಗಿ ಬೆತ್ತಲೆಯಾಗುವುದು ಜಾನ್‌ಗೆ ಅನಿವಾರ್ಯವೇ ಆಗಿತ್ತು.

(ಕೃಪೆ: ಕನ್ನಡಪ್ರಭ)

Follow Us:
Download App:
  • android
  • ios