ತಮ್ಮ ಹೊಸ ಸಿನಿಮಾ ‘ಕೋ ಕೋ ಕೋಲಾ’ದಲ್ಲಿ ನಟಿಸಲು ಸಹಾಯವಾಗುವಂತೆ ಉತ್ತರ ಪ್ರದೇಶದ ಸ್ಥಳೀಯ ಭಾಷೆಯ ಕಲಿಕೆಗೆ ಅವರು ಮುಂದಾಗಿದ್ದಾರೆ. ‘ಸಿನಿಮಾ ಎಂದು ಬಂದಾಗ ನಾನು ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನೂ ಮಾಡಿಕೊಳ್ಳುತ್ತೇನೆ. ಹೊಸದನ್ನು ಕಲಿಯಲು ಮನಸ್ಸಿದ್ದಾಗ ಹೊಸದನ್ನು ಮಾಡಲು ಸಾಧ್ಯವಾಗುತ್ತದೆ. ನನಗೆ ಹೊಸ ಹೊಸ ಭಾಷೆಗಳನ್ನು ಕಲಿಯುವುದು ಎಂದರೆ ಇಷ್ಟ. ಇದರಿಂದ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾಗುತ್ತದೆ’ ಎಂದು ಹೇಳುವ ಮೂಲಕ ತಮ್ಮ ಬದ್ಧತೆ ಪ್ರದರ್ಶನ ಮಾಡಿದ್ದಾರೆ.

ಸನ್ನಿಲಿಯೋನ್‌ ಹಂಚಿಕೊಂಡ ಮೂರು ಗುಟ್ಟುಗಳಿವು!

ಇಂದು ಪರಭಾಷೆಗಳಿಂದ ನಟ, ನಟಿಯರು ಕನ್ನಡ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ. ಅವರೂ ಇದೇ ರೀತಿ ಭಾಷೆಯನ್ನು ಕಲಿಯಲು ಮುಂದಾದರೆ ಖುಷಿ. ಇವರನ್ನು ಫಾಲೋ ಮಾಡುವ ಇವರ ಅಭಿಮಾನಿಗಳೂ ಇದೇ ರೀತಿ ತಾವು ಇರುವ ಜಾಗದ ಭಾಷೆಯನ್ನು ಕಲಿಯಲೂ ಮುಂದಾಗಬಹುದು. ಈ ನಿಟ್ಟಿನಲ್ಲಿ ಸನ್ನಿಯದ್ದು ಮಾದರಿ ನಡೆಯೇ ಸರಿ.

ಬರ್ತಡೆ ಗರ್ಲ್ ಬಗ್ಗೆ ಗೊತ್ತಿರದ 10 ಸಂಗತಿಗಳು.. ಸನ್ನಿಗೆ ಏನನ್ನ ಕಂಡ್ರೆ ಭಯ!