ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ನರ್ತಿಸುವುದು ಪಕ್ಕಾ ಆಗಿದೆ.  ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ನ.3ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸನ್ನಿಗೆ ಅನುಮತಿ ಸಿಕ್ಕಿದೆ.

ಬೆಂಗಳೂರು[ಸೆ.28]  ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸನ್ನಿ ಲಿಯೋನ್ ಗೆ ಅನುಮತಿ ಸಿಕ್ಕಿದೆ ಎಂದು ಪೊಲೀಸ್​ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್​ ಆಗಮಿಸುವುದನ್ನು ಕನ್ನಡ ಪರ ಕೆಲ ಸಂಘಟನೆಗಳು ವಿರೋಧಿಸಿದ್ದವು. ಸನ್ನಿ ಅಶ್ಲೀಲತೆಯನ್ನು ಸಂಕೇತಿಸುತ್ತಾರೆ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅನುಮತಿ ಅನುಮಾನ ಎಂದು ಹೇಳಲಾಗಿತ್ತು.

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಅವರ ತಂಡ ಕೂಡ ಪಾಲ್ಗೊಳ್ಳುತ್ತಿದ್ದು, ಕಾರ್ಯಕ್ರಮಕ್ಕಾಗಿ ಈಗಾಗಲೇ ಭರದ ಸಿದ್ಧತೆ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ಸನ್ನಿ ಒಟ್ಟು 3 ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಟಿಕೆಟ್ ಗಳ ಖರೀದಿ ಭರಾಟೆಯೂ ಜೋರಾಗಿಯೇ ಇದೆ.

ಕಳೆದ ವರ್ಷ ಹೊಸ ವರ್ಷದ ದಿನ ಬೆಂಗಳೂರಿಗೆ ಆಗಮಿಸಬೇಕಿದ್ದ ಸನ್ನಿ ಲಿಯೋನ್​ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಿದ್ದವು. ಹೀಗಾಗಿ ಸನ್ನಿ ಬೆಂಗಳೂರು ಭೇಟಿ ರದ್ದು ಪಡಿಸಲಾಗಿತ್ತು. ಈ ಬಾರಿ ಸಹ ಕಾರ್ಯಕ್ರಮಕ್ಕೆ ಆರಂಭದಲ್ಲಿ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಮಾನ್ಯತಾ ಟೆಕ್ ಪಾರ್ಕ್ ಗೆ ಸನ್ನಿ ಬರವುದು ಪಕ್ಕಾ ಆಗಿದೆ. ಈ ಬಾರಿ ಸನ್ನಿ ಲಿಯೋನ್ ಮನೆಯಲ್ಲಿ ಗಣೇಶ ಪೂಜೆಯನ್ನು ಮಾಡಲಾಗಿತ್ತು.