ಇಂದೋರ್:  ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಪರವಾಗಿ ಪಾಟಿದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಬ್ಯಾಟ್ ಬೀಸಿದ್ದಾರೆ. ಬಾಲಿವುಡ್ ನ ಖ್ಯಾತ ನಟಿಯರಾದ ನರ್ಗೀಸ್, ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್ ರಂತೆ ಸನ್ನಿ ಲಿಯೋನ್ ರನ್ನು ಏಕೆ ಕಾಣಲು ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಸನ್ನಿ  ಲಿಯೋನ್ ಕೃಪೆಯಿಂದ ಬಂಪರ್ ಬೆಳೆದ ರೈತ

ಸನ್ನಿ ಲಿಯೋನ್ ಹಿಂದೆ ನೀಲಿ ಚಿತ್ರಗಳಲ್ಲಿ ಕಾಣಿಸಿಕೊಂಡಿರಬಹುದು. ಆದರೆ ಈಗ ಆಕೆ ಸ್ವತಂತ್ರವಾದ ಇಮೇಜ್  ಬೆಳೆಸಿಕೊಂಡಿದ್ದಾಳೆ. ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಪಟೇಲ್ ಗೆ ಸನ್ನಿ ಲಿಯೋನ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮದವರು ಪ್ರಶ್ನೆ ಮಾಡಿದಕ್ಕೆ ಪಟೇಲ್ ಈ ರೀತಿ ಪ್ರತಿಕ್ರಿಯೆ ನೀಡಿದರು.  ನಮ್ಮ ಆಲೋಚನಾ ವಿಧಾನ ಬದಲಾಗದಿದ್ದರೆ ದೇಶ ಬದಲಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮತದಾರರಿಗೆ ರಾಜಕಾರಣದ ಅರಿವು ಮೂಡಿಸಲು ಹಾರ್ದಿಕ್ ಪಟೇಲ್ ಮಧ್ಯಪ್ರದೇಶದಲ್ಲಿ ಪಾದಯಾತ್ರೆ ನಡೆಸಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2019 ರ ನಂತರವೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶದ ಸಂವಿಧಾನ ಅಪಾಯಕ್ಕೆ ಸಿಲುಕಲಿದೆ ಎಂದು ಪಟೇಲ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.