ನೆಲ್ಲೂರು : ರೈತರು ಕ್ರೀಯಾ ಶೀಲರಾಗಿ ಯೋಚಿಸಿ ಕಾರ್ಯ ನಿರ್ವಹಿಸಿದಲ್ಲಿ ಅವರು ಸಾಧನೆಯನ್ನು ಮಾಡಬಹುದು. ಅದರಂತೆ ನೆಲ್ಲೂರಿನ ರೈತನೋರ್ವ  ತಮ್ಮ ಹೊಲದಲ್ಲಿ ಸನ್ನಿ ಲಿಯೋನ್ ಫೊಟೊ  ಹಾಕಿ ತನ್ನ ಬೆಳೆ ಮೇಲೆ ಜನರ ಕಣ್ಣು ಬೀಳದಂತೆ ಮಾಡಿದ್ದರು.

 ಹೋಗೋ ಬರೋ ಜನರೆಲ್ಲಾ ತಮ್ಮ ಬೆಳೆ ಮೇಲೆ ದೃಷ್ಟಿ ಹಾಕುತ್ತಾರೆ ಎಂದು ಬಿಕಿನಿ ಹಾಕಿದ ಸನ್ನಿ ಫೊಟೊ ಹಾಕಿ ತಮ್ಮ ಬೆಳೆಯತ್ತ ಜನರ ಕಣ್ಣು ಬೀಳದಂತೆ ಮಾಡಿದ್ದರು.

ಇದೀಗ ಸನ್ನಿ  ಕೃಪೆಯಿಂದ  ರೈತನಿಗೆ ಬಂಪರ್ ಬೆಳೆ ದೊರಕಿದೆಯಂತೆ. ಆದ್ದರಿಂದ ತನ್ನ  ಬೆಳೆ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬಿದ್ದಿಲ್ಲ. ಒಳ್ಳೆ ಬೆಳೆ ಈ ಸಾರಿ ಬಂದಿದ್ದು, ಸನ್ನಿ ಲಿಯೋನ್ ನಿನಗೆ ಧನ್ಯವಾದ ಎಂದು ಈ ರೈತ ಹೇಳಿದ್ದಾರೆ.