ಒಂದು ಕಾಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಇಂದು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ತಮ್ಮ ಪ್ರತಿ ಕ್ಷಣದ ನಲಿವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಒಂದು ವರ್ಷದ ಅವಧಿಯಲ್ಲಿ ಒಂದು ಹೆಣ್ಣು ಮಗು ಮತ್ತಿಬ್ಬರು ಅವಳಿ ಮಕ್ಕಳನ್ನು ದತ್ತು ಪಡೆದಿರುವ ಸನ್ನಿ ಲಿಯೋನ್ ಮತ್ತು ಡೆನೀಯಲ್ ವೇಬರ್ ಕುಟುಂಬ ಸುಖ ಸಂಸಾರ ನಡೆಸುತ್ತಿದೆ. ಮಹಾರಾಷ್ಟ್ರದ ಲಾತೂರಿನ ನಿಶಾಳೊಂದಿಗೆ ಸನ್ನಿ ತಮ್ಮ ತಾಯ್ತನ ಹಂಚಿಕೊಳ್ಳುತ್ತಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಮಗುವಿನೊಂದಿಗೆ ಇರುವ ಫೋಟೋ ಶೇರ್ ಮಾಡಿರುವ ಸನ್ನಿ ನೀನೆ ನನ್ನ ಜೀವನದ ಹೊಸ ಬೆಳಕು,, ನಿನಗೆ ಮೂರನೇ ವರ್ಷದ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದ್ದಾರೆ. ಇಡಿ ಕುಟುಂಬ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
