ಸನ್ನಿ ಲಿಯೋನ್ ಇಂದು ಒಬ್ಬ ಪರಿಪೂರ್ಣ ತಾಯಿಯಾಗಿದ್ದಾರೆ. ದತ್ತು ಪಡೆದ ಮಕ್ಕಳನ್ನು ಹೆತ್ತ ಮಕ್ಕಳಿಗಿಂತ ಹೆಚ್ಚಿಗೆ ಪ್ರೀತಿಸುತ್ತಿದ್ದಾರೆ. ಅವರ ಎಲ್ಲ ಬೇಕು ಬೇಡಗಳನ್ನುನೋಡಿಕೊಳ್ಳುತ್ತಿದ್ದಾರೆ.
ತಮ್ಮ ಪ್ರತಿ ಕ್ಷಣದ ನಲಿವುಗಳನ್ನು ಮಾಜಿ ನೀಲಿ ಚಿತ್ರ ತಾರೆ ಸನ್ನು ಲಿತೋನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಒಂದು ವರ್ಷದ ಅವಧಿಯಲ್ಲಿ ಒಂದು ಹೆಣ್ಣು ಮಗು ಮತ್ತಿಬ್ಬರು ಅವಳಿ ಮಕ್ಕಳನ್ನು ದತ್ತು ಪಡೆದಿರುವ ಸನ್ನಿ ಲಿಯೋನ್ ಮತ್ತು ಡೆನೀಯಲ್ ವೇಬರ್ ಕುಟುಂಬ ತಮ್ಮ ಮಗಳ ಬರ್ತಡೆಗೆ ವಿಶೇಷ ಗಿಫ್ಟ್ ನೀಡಿದೆ.
ಮಹಾರಾಷ್ಟ್ರದ ಲಾತೂರಿನ ನಿಶಾಳ ಮೂರನೇ ವರ್ಷದ ಜನ್ಮದಿನವನ್ನು ಸಮುದ್ರ ತೀರದಲ್ಲಿ ಆಚರಣೆ ಮಾಡಲಾಗಿದೆ. ಇನ್ ಸ್ಟಾಗ್ರಾಮ್ ನಲ್ಲಿ ಮಗುವಿನೊಂದಿಗೆ ಇರುವ ಫೋಟೋ ಶೇರ್ ಮಾಡಿರುವ ಸನ್ನಿ ಮಗಳೇ ತನ್ನ ಜೀವನದ ಆಶಾಕಿರಣ ಎಂದು ಬರೆದುಕೊಂಡಿದ್ದಾರೆ. ಮೆಕ್ಸಿಕೋದ ಬೀಚ್ ಗಳಲ್ಲಿ ಕುಟುಂಬ ಸಮೇತ ಸನ್ನಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ.
