ಬೆಂಗಳೂರು (ಆ. 30): ಕಿಚ್ಚ ಸುದೀಪ್ ಅಭಿನಯದ ಹಾಗೂ ಹೆಬ್ಬುಲಿ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರದ ಸೆಟ್‌ಗೆ ಸುನೀಲ್ ಶೆಟ್ಟಿ ಆಗಮನವಾಗಿದೆ.

ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ ಹೈದರಾಬಾದ್‌ನಲ್ಲಿ ಶೂಟಿಂಗ್ ಸೆಟ್ ಸೇರಿಕೊಂಡಿದ್ದಾರೆ. ಕಿಚ್ಚ ಸುದೀಪ್ ಮತ್ತು ಚಿತ್ರತಂಡ ಅವರೊಂದಿಗೆ ಸೆಲ್ಫೀ ತೆಗೆದು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗಿದೆ. ತಮ್ಮ ಪಾತ್ರದ ಚಿತ್ರೀಕರಣಕ್ಕಾಗಿ ನಟ ಸುನೀಲ್ ಶೆಟ್ಟಿ ಹೈದರಾಬಾದ್‌ಗೆ ಬಂದಿಳಿದ್ದು, ಬುಧವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಒಟ್ಟು 30 ದಿನಗಳ ಕಾಲದ ಕಾಲ್‌ಶೀಟ್ ನೀಡಿದ್ದಾರಂತೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುದೀಪ್ ಜೋಡಿಯಾಗಿ ಇಲ್ಲಿ ಆಕಾಂಕ್ಷ ಸಿಂಗ್ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ.