70 ಹಾಗೂ 80ರ ದಶಕದಲ್ಲಿ ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ದಿಲೀಪ್ ಕುಮಾರ್, ವಿನೋದ್ ಖನ್ನಾ ಸೇರಿದಂತೆ ಮುಂತಾದ ನಟರ ಜೊತೆ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ

ಕೋಲ್ಕತ್ತಾ(ಜು.09): ಬಾಲಿವುಡ್'ನ ಹಿರಿಯ ನಟಿ ಸುಮಿತಾ ಸನ್ಯಾಲ್(71) ವಯೋ ಸಹಜ ಕಾಯಿಲೆಯಿಂದ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಿತಾ ಸನ್ಯಾಲ್ ಅವರು 70 ಹಾಗೂ 80ರ ದಶಕದಲ್ಲಿ ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ದಿಲೀಪ್ ಕುಮಾರ್, ವಿನೋದ್ ಖನ್ನಾ ಸೇರಿದಂತೆ ಮುಂತಾದ ನಟರ ಜೊತೆ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಆನಂದ್' ಗುಡ್ಡಿ, ಮಿಲಿ, ಆಶೀರ್ವಾದ್ ಹಾಗೂ ಮೇರೆ ಅಪ್ನೆ ಇವರ ಪ್ರಮುಖ ಚಿತ್ರಗಳು.

ಹಿಂದಿ ಚಿತ್ರಗಳಲ್ಲದೆ 50ಕ್ಕೂ ಹೆಚ್ಚು ಬಂಗಾಳಿ ಸಿನಿಮಾಗಳಲ್ಲೂ ಇವರು ಪಾತ್ರ ನಿರ್ವಹಿಸಿದ್ದಾರೆ. ಸನ್ಯಾಲ್ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.