ಬಹುಭಾಷಾ ನಟಿ,  ಸುಮನ್ ರಂಗನಾಥನ್ ಉದ್ಯಮಿ ಸಜನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಮೂಲತಃ ಕೊಡಗಿನವರಾದ ಸಜನ್ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕುಟುಂಬದವರು, ಸ್ನೇಹಿತರು, ಆತ್ಮೀಯರ ಸಮ್ಮುಖದಲ್ಲಿ ಸುಮನ್ ಹಾಗೂ ಸಜನ್ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದಾರೆ. 

8 ತಿಂಗಳ ಹಿಂದೆ ಆಕಸ್ಮಿಕವಾಗಿ ನನ್ನ ಹಾಗೂ ಸಜನ್ ಭೇಟಿಯಾಯ್ತು. ಸ್ನೇಹ ಬೆಳೆಯಿತು. ಪ್ರೇಮಕ್ಕೆ ತಿರುಗಲು ಜಾಸ್ತಿ ಸಮಯ ಹಿಡಿಯಲಿಲ್ಲ, ಪ್ರೀತಿಯಲ್ಲಿ ಬಿದ್ದೆವು. ಮದುವೆಯಾಗಬೇಕೆಂದು ನಿರ್ಧರಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟೆವು ಎಂದು ಸುಮನ್ ರಂಗನಾಥನ್ ಹೇಳಿದ್ದಾರೆ. 

ಸಿಬಿಐ ಶಂಕರ್, ಡಾಕ್ಟರ್ ಕೃಷ್ಣ, ಬುದ್ದಿವಂತ, ಸಿದ್ಲಿಂಗು, ಕಟಾರಿ ವೀರ ಸುರಸುಂದರಾಂಗಿ, ನೀರ್ದೋಸೆ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 

`ಸಿದ್ಲಿಂಗು’  ಚಿತ್ರದ ಆಂಡಾಳಮ್ಮ ಪಾತ್ರಕ್ಕಾಗಿ ಫಿಲಂ ಫೇರ್ ಅವಾರ್ಡ್‍ನಲ್ಲಿ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನೂ ಸುಮನ್ ಪಡೆದಿದ್ದಾರೆ. ಅಲ್ಲದೇ 2016 ರಲ್ಲಿ ತೆರೆಕಂಡ `ನೀರ್ ದೋಸೆ’ ಚಿತ್ರಕ್ಕಾಗಿ ಕನ್ನಡದ ಉತ್ತಮ ಪೋಷಕ ನಟಿ ಎಂದು ಸೈಮಾ ಅವಾರ್ಡ್ ಕೂಡ ಗಳಿಸಿದ್ದಾರೆ. ಸದ್ಯ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಶೋನಲ್ಲಿ ಜಡ್ಜ್ ಆಗಿದ್ದರು.