ವಿಲನ್ ಆಗಲಿದ್ದಾರೆ ಸುಮನ್ ರಂಗನಾಥ್

Suman Ranganath Play a villan role in her upcoming movie
Highlights

‘ಸಿದ್ಲಿಂಗು’, ‘ನೀರ್‌ದೋಸೆ’ ಚಿತ್ರಗಳಲ್ಲಿ ಮತ್ತೆ ತನ್ನ ಖದರ್ ತೋರಿಸಿದ ಸುಮನ್ ರಂಗನಾಥ್ ಈ ಸಲ ಭರ್ಜರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುಳಿವು ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಂದ್ರಕಲಾ ನಿರ್ದೇಶನದ ‘ಚಿಲಂ’ ಚಿತ್ರದಲ್ಲಿ ಸುಮನ್ ವಿಲನ್ ಆಗಲಿದ್ದಾರೆ.

ಈಗಷ್ಟೇ ನಾನಾ ಪಾಟೇಕರ್ ಆಗಮನದ ಸಂಭ್ರಮದಲ್ಲಿರುವ ಚಿತ್ರತಂಡ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ರಾಘವೇಂದ್ರ ರಾಜ್‌ಕುಮಾರ್‌ಗೆ ಜೋಡಿ ಹುಡುಕುತ್ತಿದೆ. ಆ ಪಾತ್ರಕ್ಕೆ ಸುಮನ್ ರಂಗನಾಥ್ ಆಯ್ಕೆಯಾಗಲಿದ್ದಾರೆ. ಈ ಬಗ್ಗೆ ನಿರ್ದೇಶಕಿ ಚಂದ್ರಕಲಾ ಹೇಳುವುದಿಷ್ಟು: ‘ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ವಿಲನ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರಕ್ಕೆ ಪ್ರೇಯಸಿಯ ಹಾಗೆ ತುಂಬಾ ಆಪ್ತವಾಗಿರುವ ಒಂದು ಲೇಡಿ ಪಾತ್ರವಿದೆ. ಆ ಪಾತ್ರಕ್ಕೆ ಸೂಕ್ತವಾದವರನ್ನು ತರಬೇಕೆನ್ನುವ ಸಲುವಾಗಿ ಸಾಕಷ್ಟು ಯೋಚನೆ ಮಾಡಿದ್ದೆ. ಕನ್ನಡದಲ್ಲೇ ಜನಪ್ರಿಯರಾದ ಒಂದಿಬ್ಬರು ನಟಿಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.

ಸೂಕ್ತ ಎನಿಸುವವರು ಎಲ್ಲಿದ್ದರೂ ಸರಿ, ಅವರನ್ನೇ ಕರೆತರೋಣ ಅಂತ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರನ್ನು ಭೇಟಿ ಮಾತುಕತೆ ನಡೆಸಿದ್ದೆ. ಆದ್ರೆ ಅವರ ಸಂಭಾವನೆ ಮತ್ತು ಖರ್ಚು ವೆಚ್ಚ ದುಬಾರಿ ಎನಿಸಿತು. ಅಲ್ಲಿಂದ ವಾಪಸ್ ಬಂದು ಯೋಚಿಸುತ್ತಿದ್ದಾಗ ನನಗೆ  ಹೊಳೆದಿದ್ದು ಸುಮನ್ ರಂಗನಾಥ್. ಸದ್ಯಕ್ಕೆ ಅವರು ಓಕೆ ಹೇಳಿಲ್ಲ. ಮಾತುಕತೆ ನಡೆದಿದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನೇನು ಅವರಿಂದ ಓಕೆ ಅನ್ನೋದಷ್ಟೇ ಬಾಕಿಯಿದೆ ’ಎನ್ನುತ್ತಾರೆ ನಿರ್ದೇಶಕಿ ಚಂದ್ರಕಲಾ. 

loader