. ಕುಮಾರ್ ಎಂಬ ಅಭಿಮಾನಿಯೊಬ್ಬ ಅಂಬರೀಶ್ ಅವರಿಗೆ ಹೇಳಿ ದರ್ಶನ್ ಮತ್ತು ಸುದೀಪ್ ನಡುವಿನ ಜಗಳವನ್ನು ಪರಿಹರಿಸುವಂತೆ ಕೇಳಿದ್ದಾನೆ.
ಬೆಂಗಳೂರು(ಮಾ.13): ನಟ ಸುದೀಪ್ ಮತ್ತು ದರ್ಶನ್ ನಡುವಿನ ಗಲಾಟೆ ಬಗ್ಗೆ ಅಭಿಮಾನಿ ಕೊಟ್ಟ ಸಲಹೆಗೆ ನಟಿ ಸುಮಲತಾ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕುಮಾರ್ ಎಂಬ ಅಭಿಮಾನಿಯೊಬ್ಬ ಅಂಬರೀಶ್ ಅವರಿಗೆ ಹೇಳಿ ದರ್ಶನ್ ಮತ್ತು ಸುದೀಪ್ ನಡುವಿನ ಜಗಳವನ್ನು ಪರಿಹರಿಸುವಂತೆ ಕೇಳಿದ್ದಾನೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸುಮಲತಾ ಅವರಿಬ್ಬರು ಪ್ರಬುದ್ಧ ವಯಸ್ಕರು. ಅವರಿಬ್ಬರು ಇಂದು ನಿರ್ಧಾರಕ್ಕೆ ಬಂದಿದ್ದಾರೆ. ಸರಿಯೋ ತಪ್ಪೋ ಅದನ್ನು ಗೌರವಿಸಿ ಎಂದಿದ್ದಾರೆ. ಈ ಮೂಲಕ ದರ್ಶನ್ ಮತ್ತು ಸುದೀಪ್ ಜಗಳವನ್ನು ದೊಡ್ಡದು ಮಾಡಬೇಡಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.

