ಭಾರತೀಯ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಮಣಿರತ್ನಂ. ಮುಗುಳ್ನಗೆ ಸುಂದರಿ ಸುಹಾಸಿನಿ ದಾಂಪತ್ಯಕ್ಕೆ ಕಾಲಿಟ್ಟು ನಿನ್ನೆಗೆ ಭರ್ತಿ ಮೂವತ್ತು ವರ್ಷ ತುಂಬಿತು.
ಬೆಂಗಳೂರು (ಆ. 27): ಭಾರತೀಯ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಮಣಿರತ್ನಂ. ಮುಗುಳ್ನಗೆ ಸುಂದರಿ ಸುಹಾಸಿನಿ ದಾಂಪತ್ಯಕ್ಕೆ ಕಾಲಿಟ್ಟು ನಿನ್ನೆಗೆ ಭರ್ತಿ ಮೂವತ್ತು ವರ್ಷ ತುಂಬಿತು. ವಿವಾಹ ವಾರ್ಷಿಕೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಸುಹಾಸಿನಿ ಪತಿ ಮಣಿರತ್ನಂಗೆ ಶುಭಕೋರಿದ್ದು ಹೀಗೆ:-
ಸುಹಾಸಿನಿ ಎಂದರೆ ಮಾಸದ ನಗು, ಕಳೆಗುಂದದ ಸೌಂದರ್ಯ, ಅದ್ಭುತ ನಟನೆ, ಕಣ್ಣುಗಳ ತುಂಟಾಟ ಇದೇ ನೆನಪಾಗುತ್ತದೆ. ಇನ್ನು ಮಣಿರತ್ನಂ ಬಗ್ಗೆ ಹೇಳುವುದೇ ಬೇಡ. ಸಿನಿಮಾ ರಂಗ ಕಂಡ ಅದ್ಭುತ ನಿರ್ದೇಶಕರವರು. ಹಿಟ್ ಸಿನಿಮಾಗಳ ಸರದಾರ ಅವರು. ಸುಹಾಸಿನಿ ಮಣಿರತ್ನಂ ದಾಂಪತ್ಯಕ್ಕೆ ಕಾಲಿಟ್ಟು 30 ವರ್ಷ ತುಂಬಿತು. ಬೆಂಕಿಯಲ್ಲಿ ಅರಳಿದ ಹೂವು, ಬಂಧನ, ಮುತ್ತಿನ ಹಾರ, ಅಮೃತವರ್ಷಿಣಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಸುಹಾಸಿನಿಯನ್ನು ಯಾರು ಮರೆಯಲು ಸಾಧ್ಯ ಹೇಳಿ?
ಇನ್ನು ಮಣಿರತ್ನಂ ಸಿನಿಮಾವೆಂದರೆ ಸಾಕು ಅದರಲ್ಲೆನೋ ವಿಶೇಷವಿರುತ್ತದೆ. ಹೊಸ ಕಥೆ ಇರುತ್ತದೆ. ಮನಮುಟ್ಟುವ ಸಂಗೀತ ಇರುತ್ತದೆ. ಸೃಜನಶೀಲತೆ ಇರುತ್ತದೆ. ಅವರ ಹೆಸರೇ ಸಾಕು ಸಿನಿಮಾ ನೋಡಲು. ಈ ಮುದ್ದಾದ ಜೋಡಿಗೆ ಹ್ಯಾಪಿ ವೆಡ್ಡಿಗ್ ಆ್ಯನಿವರ್ಸರಿ ಹೇಳೋಣ ಅಲ್ಲವೇ?
