ಬೆಂಗಳೂರು(ಸೆ.18): ಕನ್ನಡ ಕಿರುತರೆ ಲೋಕದಲ್ಲಿ ಬಿಗ್ ಬಾಸ್ ರಿಯಾಲಟಿ ಶೋ ಹೊಸ ಅಲೆಯನ್ನು ಸೃಷ್ಠಿಸಿದೆ ಎಂದರೆ ತಪ್ಪಾಗುವುದೇ ಇಲ್ಲ. ಈಗ ಮತ್ತೆ ಹೊಸ ರೂಪದಲ್ಲಿ, ಹೊಸ ತನದಲ್ಲಿ ಜನ-ಮನ ತಲುಪಲು ಬಿಗ್ ಬಾಸ್ 4ನೇ ಆವೃತ್ತಿ ಸಿದ್ಧಗೊಂಡಿದ್ದು, ಈ ಹಿನ್ನೆಯಲ್ಲಿ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. 

ಸದ್ಯ ಬಿಗ್ ಬಾಸ್ 4ರ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ನಲ್ಲಿ ನಡೆಯುವ ಸತ್ಯ ಸಂಗತಿಗಳನ್ನು ಫಿಲ್ಟರ್ ಇಲ್ಲದೆ ಬಾಯಿಟ್ಟಿದ್ದಾರೆ. ಬಿಗ್ ಬಾಸ್ ನಲ್ಲಿ ನಡೆಯುವ ಘಟನೆಗಳಲ್ಲಿ ಎಷ್ಟು ಸತ್ಯ-ಎಷ್ಟು ಸುಳ್ಳು ಎಂಬುದನ್ನೇ ಇಟ್ಟಿಕೊಂಡು ಮಾತನಾಡಿದ್ದಾರೆ. 

ಕನ್ನಡದ ಬಿಗ್ ಬಾಸ್ ಈಗಾಗಲೇ ಯಶಸ್ವಿಯಾಗಿ ಸುದೀಪ್ ನಿರೂಪಣೆಯಲ್ಲಿ ಮೂಡಿಬಂದಿದ್ದು, 4ನೇ ಆವೃತ್ತಿಯೂ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ. ಅಲ್ಲೇ ಈ ಬಾರಿ ಬಿಗ್ ಬಾಸ್ ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾಗಲಿದೆ.