ನಾನು ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು. ನನ್ನ ಚುನಾವಣಾ ಪ್ರಚಾರ ಉದ್ಘಾಟನೆ ಮಾಡಿದ್ದೇ ಸುದೀಪ್.
ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ವದಂತಿಗಳು ಹಬ್ಬಿ ಅದು ನಿಜವೆಂದು ಕಾಂಗ್ರೆಸ್'ನ ಹಲವು ನಾಯಕರು ಖಚಿತ ಪಡಿಸಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಸುದ್ದಿ ಹರಿದಾಡುತ್ತಿದೆ.
ಇದರ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟ ಕಿಚ್ಚ ಸುದೀಪ್ ಕೂಡ ರಾಜಕೀಯಕ್ಕಿಳಿಯುವ ಸೂಚನೆ ಕಾಣುತ್ತಿವೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ನಾನು ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು. ನನ್ನ ಚುನಾವಣಾ ಪ್ರಚಾರ ಉದ್ಘಾಟನೆ ಮಾಡಿದ್ದೇ ಸುದೀಪ್. ನಾನು ಸುದೀಪ್ ಜತೆ ಸೇರಿದಂತೆ ಹಲವು ನಟರ ಜತೆ ಮಾತುಕತೆ ನಡೆಸ್ತೇನೆ. ಚುನಾವಣಾ ಸಂದರ್ಭದಲ್ಲಿ ಎಲ್ಲವನ್ನು ಹೇಳುತ್ತೇವೆ. ಕಾಂಗ್ರೆಸ್ ನವರ ಬಾಣಕ್ಕೆ ಪ್ರತಿಯಾಗಿ ನಾವು ಬಾಣ ಬಿಡ್ತೀವಿ.ಸಾಕಷ್ಟು ಸ್ಟಾರ್'ಗಳು ಪಕ್ಷ ಸೇರ್ಪಡೆ ಆಗ್ತಾರೆ. ನಮ್ಮ ಪಕ್ಷದ ಪರ ಪ್ರಚಾರವನ್ನೂ ಮಾಡ್ತಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ತಾರೆ' ಎಂದು ಅಶೋಕ್ ತಿಳಿಸಿದ್ದಾರೆ
ಸೇವೆ ಇಲ್ಲೇ ಮಾಡುತ್ತಿದ್ದೇನೆ
ಕೆಲವು ದಿನಗಳ ಹಿಂದೆ ಸುವರ್ಣ ನ್ಯೂಸ್'ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು 'ಜನರ ಸೇವೆ ಮಾಡಲು ರಾಜಕೀಯಕ್ಕೆ ಬರಬೇಕಾಗಿಲ್ಲ. ಸಿನಿಮಾ ಕ್ಷೇತ್ರದಲ್ಲಿದ್ದುಕೊಂಡೆ ನಾನು ಮಾಡುತ್ತಿದ್ದೇನೆ. ರಾಜಕೀಯಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದರು.

