ಇಲ್ಲಿಗೆ ಬರುವ ಒಬ್ಬೊಬ್ಬರದ್ದು ಒಂದೊಂದು ವ್ಯಕ್ತಿತ್ವ. ಅವರ ಜತೆಗೆ ಒಡನಾಡುವ ಪರಿಯೇ ಅದ್ಭುತ. ಈಗಲೂ ಅಂಥದ್ದೇ ವ್ಯಕ್ತಿತ್ವಗಳು ಸಿಗಲಿವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗಾಗಲೇ ಬಂದುಹೋದ ಕಂತುಗಳಲ್ಲಿ ಅದು ನಿಮಗೂ ಕಂಡಿದೆ.
15 ಸ್ಟಾರ್'ಗಳು, 55 ಕ್ಯಾಮೆರಾಗಳು, ನೂರು ದಿನ, ಒಂದು ಮನೆ. ಇದು ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್ ಕತೆ ಎನ್ನುವುದು ನಿಮಗೆಲ್ಲ ಗೊತ್ತಿರುವ ಸಮಾಚಾರವೇ. ಅಂದಹಾಗೆ, ‘ಬಿಗ್‌ಬಾಸ್ ಸೀಸನ್ 4’ ಅ.9ರಿಂದ ಕಲರ್ಸ್ ಕನ್ನಡದಲ್ಲಿ ಮತ್ತೆ ಶುರುವಾಗುತ್ತಿದೆ. ವಿಶೇಷವಾಗಿ ಈ ಬಾರಿ ಬಿಗ್‌ಬಾಸ್ ರಿಯಾಲಿಟಿ ಶೋ ವಿಭಿನ್ನ ಎನಿಸಿಕೊಂಡಿದ್ದು ಅದರ ಸ್ಪರ‌್ಗಳ ಆಯ್ಕೆಯ ಮೂಲಕ. ಹಿಂದಿನ ಶೋಗಳಲ್ಲಿ ಸಿನಿಮಾ ಮತ್ತು ಕಿರುತೆರೆಯ ಸೆಲೆಬ್ರಿಟಿಗಳೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಾರ್ ಎ ಚೇಂಜ್, ಈ ಬಾರಿ ಕಿರುತೆರೆ, ಸಿನಿಮಾ, ಸಂಗೀತ, ಕ್ರೀಡೆ, ಪತ್ರಿಕೋದ್ಯಮ, ನೃತ್ಯ, ನಿರೂಪಣೆ ಕ್ಷೇತ್ರಗಳಲ್ಲಿನ ಸೆಲೆಬ್ರಿಟಿಗಳ ಮೂಲಕ ಬಿಗ್‌ಬಾಸ್ ಮತ್ತಷ್ಟು ಕಲರ್‌ುಲ್ ಆಗುತ್ತಿದೆ. ಆದರೂ, ಕಿರುತೆರೆ ಮತ್ತು ಸಿನಿಮಾಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದ್ದನ್ನು ಕಲರ್ಸ್ ಕನ್ನಡ ಪರಿಗಣಿಸಿರುವ ಸ್ಪರ‌್ಗಳ ಸಂಭವನೀಯರ ಪಟ್ಟಿಯೇ ಹೇಳುತ್ತಿದೆ. ಇವರೆಲ್ಲರ ಮುಖಗಳ ಹಿಂದಿನ ಮುಖ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ.
ಕನ್ನಡದ ಮಟ್ಟಿಗೆ ಬಿಗ್‌ಬಾಸ್ ಹೆಚ್ಚು ಜನಪ್ರಿಯತೆ ಸಾಸಿಕೊಂಡಿದ್ದು ನಟ ಕಿಚ್ಚ ಸುದೀಪ್ ನಿರೂಪಣೆಯ ಮೂಲಕ. ಈಗಾಗಲೇ ಬಂದುಹೋದ ಮೂರು ಸೀಸನ್‌ಗಳಿಗೂ ಅವರೇ ನಿರೂಪಕರು. ಅಂದಹಾಗೆ, ಸೀಸನ್ ನಾಲ್ಕರಲ್ಲೂ ಅವರೇ ಇರುತ್ತಾರಾ ಎನ್ನುವುದರ ಬಗ್ಗೆ ಅನುಮಾನವೇ ಬೇಡ. ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ‘ಸೀಸನ್ 4’ರ ನಿರೂಪಣೆಗೆ ಅದಾಗಲೇ ಸಜ್ಜಾಗಿ ನಿಂತಿದ್ದಾರೆ ಸುದೀಪ್. ‘ಪ್ರತಿ ಸೀಸನ್ ಸಂದರ್ಭದಲ್ಲೂ ಹೊಸಬರನ್ನು ನೋಡುತ್ತಾ, ಹೊಸತನ್ನು ಕಲಿಯುತ್ತಾ ಬರುತ್ತಿದ್ದೇನೆ. ಈಗಲೂ ಅಂಥದ್ದೇ ಅನುಭವಕ್ಕೆ ಕಾಯುತ್ತಿದ್ದೇನೆ. ಇಲ್ಲಿಗೆ ಬರುವ ಒಬ್ಬೊಬ್ಬರದ್ದು ಒಂದೊಂದು ವ್ಯಕ್ತಿತ್ವ. ಅವರ ಜತೆಗೆ ಒಡನಾಡುವ ಪರಿಯೇ ಅದ್ಭುತ. ಈಗಲೂ ಅಂಥದ್ದೇ ವ್ಯಕ್ತಿತ್ವಗಳು ಸಿಗಲಿವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗಾಗಲೇ ಬಂದುಹೋದ ಕಂತುಗಳಲ್ಲಿ ಅದು ನಿಮಗೂ ಕಂಡಿದೆ. ಈಗಾಗಲೇ ಕಂಡಿರೋ ಮುಖಗಳ ಕಾಣದೇ ಇರುವ ಮುಖ ಅನಾವರಣಕ್ಕೆ ನಾನು ಕೂಡ ಕಾತರದಲ್ಲಿದ್ದೇನೆ’ ಎನ್ನುತ್ತಾರೆ ಕಿಚ್ಚ.
ಬಿಗ್‌ಬಾಸ್‌ಗೆ ನಟ ಸುದೀಪ್ ಕಾಯಂ ನಿರೂಪಕರಂತೆ ಆಗಿದ್ದರೂ, ಸಿನಿಮಾದಲ್ಲೂ ಅವರೀಗ ಸಾಕಷ್ಟು ಬ್ಯುಸಿ. ‘ಕೋಟಿಗೊಬ್ಬ’ ಚಿತ್ರದ ನಂತರ ‘ಹೆಬ್ಬುಲಿ’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆಯಲ್ಲಿದ್ದಾರೆ. ಈ ನಡುವೆಯೇ ಬಿಗ್‌ಬಾಸ್ ನಿರೂಪಣೆಯ ಜವಾಬ್ದಾರಿ ನಿರ್ವಹಿಸುವುದು ಸವಾಲಿನ ಕೆಲಸವೇ. ‘ಬಿಗ್‌ಬಾಸ್ ಶೋ ನಿರೂಪಿಸುವುದು ಅಂದ್ರೆ ಅದೊಂದು ಸವಾಲಿನ ಕೆಲಸ. ಇದಕ್ಕೆ ಬೇಕಾಗುವ ದೈಹಿಕ ಶಕ್ತಿ ಒಂದು ಕಡೆಯಾದರೆ, ಮಾನಸಿಕವಾಗಿ ಅದು ನೀಡುವ ಒತ್ತಡ ಇನ್ನೊಂದು ಕಡೆ. ಮನೆಯಲ್ಲಿ ಕುಳಿತ ಸ್ಪರ‌್ಗಳ ಮನಸ್ಸಿನಲ್ಲಿ ಉಂಟಾಗುವ ಎಲ್ಲ ಆತಂಕಗಳಿಗೆ ನಿರೂಪಕನಾಗಿ ಉತ್ತರ ನೀಡಬೇಕು. ಬೇಸರವಾದಾಗ ಮೆಲ್ಲಗೆ ಸಂತೈಸಬೇಕು. ಅಂಕೆ ಮೀರಿದಾಗ ಲೈಟಾಗಿ ಕಿವಿ ಹಿಂಡಬೇಕು. ಒಟ್ಟಿನಲ್ಲಿ ಮನೆಯಲ್ಲಿ ಸಮತೋಲನ ಇರುವಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ಸುದೀಪ್.
