ಅಭಿಮಾನಿಗಳಿಗೆ ಸುದೀಪ್ ಬರೆದ ಪತ್ರದ ಸಂಕ್ಷಿಪ್ತ ಸಾರಂಶ

ಬೆಂಗಳೂರು(ಜು.11): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಅನಿರೀಕ್ಷಿತ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ತಾವು ಇನ್ನು ಮುಂದೆ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ಅವರು ತಾವುಗಳೆಲ್ಲರೂ ಇಷ್ಟು ವರ್ಷಗಳಿಂದ ನನ್ನ ಹುಟ್ಟುಹಬ್ಬವನ್ನು ಅತ್ಯುತ್ಸಾಹದಿಂದ ಆಚರಿಸಿ ಪ್ರೀತಿಯಿಂದ ತೋರಿದ ಅಭಿಮಾನಕ್ಕೆ ನಾನು ಸದಾ ಚಿರಋಣಿ'ಎಂದು ತಮ್ಮ ಗೂಗಲ್ ಪ್ಲಸ್ ಅಕೌಂಟ್'ನಲ್ಲಿ ಬರೆದುಕೊಂಡು ಟ್ವಿಟರ್'ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಭಿಮಾನಿಗಳಿಗೆ ಸುದೀಪ್ ಬರೆದ ಪತ್ರದ ಸಂಕ್ಷಿಪ್ತ ಸಾರಂಶ

ನಮಸ್ತೆ ಗೆಳೆಯರೇ,

'ಹಲವು ವರ್ಷಗಳಿಂದ ನನ್ನ ಹುಟ್ಟುಹಬ್ಬವನ್ನು ಸಡಗರದಿಂದ, ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೀರಿ. ಅದಕ್ಕಾಗಿ ತಾವುಗಳು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೇಕುಗಳು, ಹೂಮಾಲೆ ಸೇರಿದಂತೆ ಅಲಂಕಾರಿಕಾ ವಸ್ತುಗಳಿಗಾಗಿ ಖರ್ಚು ಮಾಡುತ್ತಾ ಬಂದಿದ್ದೀರಿ. ಅದೆಷ್ಟೋ ದೂರದಿಂದ ಬಂದು ಮನೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಅಲಂಕರಿಸುತ್ತಿದ್ದೀರಾ.

ಇನ್ನು ಮುಂದು ನನ್ನ ಹುಟ್ಟುಹಬ್ಬಕ್ಕೆ ಪೋಲು ಮಾಡುವ ಹಣವನ್ನು ದಿನದ ಊಟಕ್ಕೆ ಪರದಾಡುವ ಬಡವರಿಗಾಗಿ ವೆಚ್ಚ ಮಾಡಿ ಎಂದು ವಿನಮ್ರವಾ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಹುಟ್ಟು ಹಬ್ಬಕ್ಕಾಗಿ ಖರ್ಚು ಮಾಡುವ ಹಣ ಬೇರೆಯೊಬ್ಬರ ಜೀವನ ಅಥವಾ ಮನೆಯನ್ನು ಬೆಳಗಲಿ. ಇದೆ ನನಗೆ ನೀವು ಕೊಡುವ ಅತ್ಯುತ್ತಮ ಉಡುಗೊರೆ. ಇದೇ ಉತ್ತಮವಾಗಿ ಹುಟ್ಟುಹಬ್ಬ ಆಚರಿಸುವ ವಿಧಾನ ಹಾಗೂ ಕಷ್ಟದಲ್ಲಿರುವವರಿಗೆ ಮಾಡುವ ಸೇವೆ.

ಇನ್ನು ಮುಂದೆ ನಾನು ಕೂಡ ಹುಟ್ಟುಹಬ್ಬದಂದು ಮನೆಯಲ್ಲಿ ಇರದೆ ಹೊರಗಡೆ ಉಳಿಯಲು ಬಯಸುತ್ತೇನೆ. ಅಲ್ಲದೆ ನಿಮಗೆ ಹೇಳಿದಂತೆಯೇ ಮಾಡುತ್ತೇನೆ. ನೊಂದವರಿಗೆ ಸಹಾಯ ಮಾಡಿ. ಮುಂದೊಂದು ದಿನ, ಒಂದೇ ಒಂದು ಬೆಳಕಿನ ಕಿರಣಕ್ಕಾಗಿ ಹಂಬಲಿಸುವ ಹೊತ್ತಲ್ಲಿ, ಬೆಳಕು ನಿಮ್ಮ ಮೇಲೆ ಬಿದ್ದು ಹೊಳೆಯುವುದನ್ನು ನೀವು ಕಾಣುತ್ತೀರಿ.

ನಿಮ್ಮ ಪ್ರೀತಿಯ

ಕಿಚ್ಚ.'