ಬೆಂಗಳೂರು(ಅ.05): ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2 ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ. ಕಿಚ್ಚ ಸುದೀಪ್ ಫಸ್ಟ್ ಟೈಮ್ ಕಮಾಂಡೋ ಪಾತ್ರದಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚೋದಿಕ್ಕೆ ರೆಡಿಯಾಗಿರೋ ಚಿತ್ರ ಹೆಬ್ಬುಲಿ ಬಾರಿ ಸುದ್ದಿ ಮಾಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ಶೂಟಿಂಗ್ ಹಂತದಲ್ಲಿರೋ ಹೆಬ್ಬುಲಿ ಚಿತ್ರ ಭಾರಿ ಡಿಮ್ಯಾಂಡ್ ಸೃಷ್ಠಿಸಿದೆ. ಹೆಬ್ಬುಲಿ ಚಿತ್ರದ ಟಿ.ವಿ. ರೈಟ್ಸ್ 5.5 ಕೋಟಿ ರೂ.ಗೆ ಖರೀದಿಸಲು ಪ್ರತಿಷ್ಠಿತ ಎಂಟರ್ ಟೈನ್ ಮೆಂಟ್ ಚಾನೆಲ್ ಮುಂದಾಗಿದೆ ಎನ್ನಲಾಗಿದೆ. 

ಇದರೊಂದಿಗೆ ಆಡಿಯೋ ರೈಟ್ಸ್ ಕೂಡ ದಾಖಲೆ ಮೊತ್ತಕ್ಕೆ ಅಂದರೆ, 1.50 ಕೋಟಿ ರೂ.ಗೆ ಖರೀದಿಸಲು ದೊಡ್ಡ ಆಡಿಯೋ ಸಂಸ್ಥೆಯೊಂದು ಆಸಕ್ತಿ ತೋರಿದೆ ಎಂದು ಹೇಳಲಾಗಿದೆ. 

ಈ ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದ್ದು, ಎಸ್.ಆರ್.ವಿ. ಪ್ರೊಡಕ್ಷನ್ಸ್ ನ ರಘುಪತಿ, ಉಮಾಪತಿ ಫಿಲಮ್ಸ್ ನ ಉಮಾಪತಿ ನಿರ್ಮಾಣ ಮಾಡಿದ್ದಾರೆ.