ಶುಭ ಪೂಂಜ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದಾರೆ. ‘ತೆನ್‌ಕಾಸಿ ಬ್ರದರ್ಸ್’ ಹೆಸರಿನ ಚಿತ್ರದೊಂದಿಗೆ ಅವರು ಇದೇ ಮೊದಲು ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಈ ಚಿತ್ರ ಮಲಯಾಳಂ ಜತೆಗೆ ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ.
ಮಲಯಾಳಂನ ಚಿತ್ರ ಸಾಹಿತಿ ಅಶ್ವಿನ್ ಮ್ಯಾಥ್ಯೂ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯೇ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದೆ. ‘ಕನ್ನಡದ ಜತೆಗೆ ತೆಲುಗು ಹಾಗೂ ತಮಿಳಿನಲ್ಲಿ ಅಭಿನಯಿಸಿದ್ದೆ. ಆದರೆ ಮಲಯಾಳಂ ಸಿನಿಮಾದಲ್ಲಿ ಅವಕಾಶ ಸಿಕ್ಕಿಲ್ಲ ಎನ್ನುವ ಕೊರಗು ಇತ್ತು. ಅದು ಈಗ ಈಡೇರಿದೆ. ಕತೆಯ ಜತೆಗೆ ಪಾತ್ರದ ಬಗ್ಗೆ ಕೇಳಿದೆ. ಚೆನ್ನಾಗಿದೆ ಎಂದೆನಿಸಿತು. ಒಪ್ಪಿಕೊಂಡೆ’ ಎನ್ನುತ್ತಾರೆ ಶುಭಾ ಪೂಂಜ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಕೇರಳಕ್ಕೆ ಹೋಗಿ ವಾರವೇ ಕಳೆದಿದೆ. ಎಲ್ಲಾ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ ಖ್ಯಾತಿ ಶುಭಾ ಅವರದ್ದು. ಈಗ ‘ತೆನ್‌ಕಾಸಿ ಬ್ರದರ್ಸ್’ನಲ್ಲಿ ತರಕಾರಿ ಮಾರುವ ಹುಡುಗಿ ಆಗಿ ಅಭಿನಯಿಸುತ್ತಿದ್ದಾರೆ.