Asianet Suvarna News Asianet Suvarna News

ಸೈಫ್ ಅಲಿ ಖಾನ್ ಮೇಲೂ ನಡೆದಿತ್ತಂತೆ ದೌರ್ಜನ್ಯ!

#MeToo ಗೆ ಸೈಫ್ ಅಲಿ ಖಾನ್ ಬೆಂಬಲ |  ತಮ್ಮ ಜೀವನದ ಅನುಭವ ಬಿಚ್ಚಿಟ್ಟ ಸೈಫ್ ಅಲಿ ಖಾನ್ | ಇವರ ಮೇಲೂ ನಡೆದಿತ್ತಾ ದೌರ್ಜನ್ಯ 

Still angry about being harassed 25 years ago says Saif Ali Khan
Author
Bengaluru, First Published Oct 15, 2018, 2:01 PM IST
  • Facebook
  • Twitter
  • Whatsapp

ಮುಂಬೈ (ಅ. 15): #MeToo ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಗಂಡಸರೂ ಕೂಡಾ ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬೆಂಬಲಕ್ಕೆ ನಿಂತಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೂಡಾ #MeToo ಗೆ ಬೆಂಬಲಿಸಿದ್ದಾರೆ. 

ಕನ್ನಡದ ಆರ್‌ಜೆಯೊಬ್ಬರು ಬಿಚ್ಚಿಟ್ರು #MeToo ಅನುಭವ

ಇದೇ ವೇಳೆ ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ನಾನೂ ಕೂಡಾ ದೌರ್ಜನ್ಯಕ್ಕೊಳಗಾಗಿದ್ದೇನೆ. ಅದು ದೈಹಿಕ ದೌರ್ಜನ್ಯ ಅಲ್ಲದೇ ಇರಬಹುದು ಆದರೆ ಮಾನಸಿಕ ಹಿಂಸೆಗೊಳಗಾಗಿದ್ದೇನೆ. 25 ವರ್ಷಗಳ ಹಿಂದೆ ನಡೆದ ಆ ಘಟನೆಯನ್ನು ನಾನಿನ್ನೂ ಮರೆಯಲಾರೆ. ಅದನ್ನು ನೆನೆಸಿಕೊಂಡರೆ ನನಗೀಗಲು ಕೋಪ ಬರುತ್ತದೆ ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲೂ ಮೀ ಟೂ, ಬೋಲ್ಡ್ ನಟಿ ಹೇಳಿದ ಪಟ್ಟಿಯಲ್ಲಿ ಯಾರ ಹೆಸರಿದೆ?

ಬಹುತೇಕ ಜನರು ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಬೇರೆಯವರ ನೋವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ.  ನಾನದರ ಬಗ್ಗೆ ಮಾತನಾಡುವುದಿಲ್ಲ. ನನ್ನ ಜೀವನದಲ್ಲಿ ನಡೆದ ಆ ಘಟನೆ ನೆನದರೆ ಈಗಲೂ ಕೋಪ ಉಕ್ಕುತ್ತದೆ ಎಂದು ಸೈಫ್ ಹೇಳಿದ್ದರು. 

ಯಾವ ಘಟನೆ, ನಡೆದಿದ್ದೇನು? ಯಾರ ಬಗ್ಗೆ ಹೇಳುತ್ತಿದ್ದಾರೆ ಎಂದು ಯಾವುದನ್ನೂ ಬಹಿರಂಗಪಡಿಸಿಲ್ಲ.  

Follow Us:
Download App:
  • android
  • ios