ಮೀ ಟೂ ಅಭಿಯಾನದಲ್ಲಿ ಕನ್ನಡದ ನಟಿಯೊಬ್ಬರು ಧ್ವನಿ ಎತ್ತಿದ್ದಾರೆ. ನಾನೇಕೆ ಚಿತ್ರರಂಗದಿಂದ ದೂರ ಉಳಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಹಾಗಾದರೆ ಆ ನಟಿ ಯಾರು? ಅವರಿಗೆ ಲೈಂಗಿಕ ಕಿರುಕುಳ ನೀಡಿದವರು ಯಾರು?
ಪ್ರೀತಿ ಗೀತಿ ಇತ್ಯಾದಿ', 'ಎರಡನೇ ಸಲ', 'ದಯವಿಟ್ಟು ಗಮನಿಸಿ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಸಂಗೀತ ಭಟ್ ತಾವು ಅನುಭವಿಸಿದ ಯಾತನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಾಸ್ಟಿಂಗ್ ಡೈರೆಕ್ಟರ್, ಡೈರೆಕ್ಟರ್, ಹೇರ್ ಡ್ರೆಸ್ಸರ್, ನಟರು ಸೇರಿದಂತೆ ಹಲವರಿಂದ ನಟಿ ಸಂಗೀತ ಭಟ್ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. ನಾನು ಮದುವೆಯಾದ ವಿಚಾರವನ್ನು ಸಹ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಮುಚ್ಚಿಟ್ಟಿದ್ದೆ ಎಂದಿರುವ ಸಂಗೀತಾ ಯಾರ ಹೆಸರನ್ನು ಹೇಳಿಲ್ಲ.
