ಅಪಘಾತವೊಂದರಲ್ಲಿ ಕಾಲುಗಳ ಚಲನ ಕಳೆದುಕೊಂಡು ವೀಲ್‌ ಚೇರ್‌ನಲ್ಲಿ ಬದುಕು ಸಾಗಿಸುತ್ತಿರುವ ಅರ್ಜುನ್‌ ಪಾತ್ರ ಮಾಡುತ್ತಿದ್ದಾರೆ ಟ ಯೋಗೇಶ್‌. ಅರ್ಜುನ್‌ ತಾಯಿ ಮಾತೇ ವಾದವಾಕ್ಯ, ಮೀನಾಕ್ಷಮ್ಮನಿಗೆ ಪ್ರೀತಿಯ ಮಗನ ಬಗ್ಗೆ ಅಪಾರ ಹೆಮ್ಮೆ. ಮೇಲ್ನೋಟಕ್ಕೆ ಮೀನಾಕ್ಷಮ್ಮನ ಮನೆಯಲ್ಲಿ ಎಲ್ಲರೂ ಆನಂದವಾಗಿ ನೆಮ್ಮದಿಯಿಂದಿದ್ದರೂ, ಅವರಿಗೆ ಮನೆಯ ಒಳಗೂ ಹೊರಗೂ ಶತ್ರುಗಳಿಗೆ ಬರವಿಲ್ಲ.

ಕಿರುತೆರೆಯಲ್ಲಿ ಹಿರಿಯ ನಟ ಶಿವರಾಂ!

ಮುದ್ದು ಗಿಳಿ ಮೀರಾ ಪಾತ್ರದಲ್ಲಿ ವರ್ಷಿಕ ನಟಿಸುತ್ತಿದ್ದಾಳೆ. ನಿಷ್ಕಲ್ಮಷ ಮನಸ್ಸಿನ ಈ ಹುಡುಗಿ ಇದ್ದ ಕಡೆ ಕಣ್ಣೀರಿಗೆ ಜಾಗವಿಲ್ಲ. ಎಲ್ಲರೂ ಸಂತೋಷದಿಂದಿರಬೇಕು ಎಂದು ಬಯಸುವ ಮೀರಾ, ಮನೆಯವರು ಮತ್ತು ತಾನು ದೇವರು ಎಂದು ಭಾವಿಸುವ ಮೀನಾಕ್ಷಮ್ಮನ ಗೌರವಕ್ಕೆ ಧಕ್ಕೆಯಾಗುವ ಸಂದರ್ಭ ಬಂದಾಗ ತನ್ನ ಕನಸುಗಳು ಮತ್ತು ಜೀವನವನ್ನೇ ತ್ಯಾಗ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಬೇಡಿ ಬಂದವರ ಕಷ್ಟನೀಗಿಸುವ ಮೀನಾಕ್ಷಿಯಮ್ಮನ ಬದುಕಲ್ಲಿ ನಗು ಅರಳಿಸೋಕೆ ಬರುತ್ತಿದ್ದಾಳೆ ಮುದ್ದು ಗಿಳಿ ಮೀರಾ. ಲವಲವಿಕೆಯ ಮಾತಿನ ಮಲ್ಲಿ ಮುದ್ದು ಗಿಳಿ ಮೀರಾಳ ಕಥೆ ಅರಮನೆ ಗಿಳಿ ಕನ್ನಡ ಕಿರುತೆರೆಯಲ್ಲಿ ಮೀನಾಕ್ಷಮ್ಮನಾಗಿ ಪವಿತ್ರಾ ಲೋಕೇಶ್‌!

ಸ್ವಚ್ಛಂದವಾಗಿ ಹಾರಾಡುವ ಮುದ್ದು ಗಿಳಿಯ ಕಥೆ ಹೇಳಲು ಹೊರಟಿದೆ ಸ್ಟಾರ್‌ ಸುವರ್ಣ ವಾಹಿನಿ. ಬಹಳ ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ನಟಿ ಪವಿತ್ರಾ ಲೋಕೇಶ್‌ ಮರಳಿದ್ದಾರೆ. ಊರಿಗೆ ಊರೇ ಗೌರವ ಕೊಡುವ, ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡುವ ಮೀನಾಕ್ಷಿಯಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೀನಾಕ್ಷಿಯಮ್ಮನ ಪಾತ್ರಕ್ಕೆ ಪವಿತ್ರಾ ಲೋಕೇಶ್‌ ಅವರೇ ಹೇಳಿ ಮಾಡಿಸಿದ ನಟಿ ಎನ್ನುವ ವಾಹಿನಿಯ ನಂಬಿಕೆಯಂತೆ ಅವರ ಪಾತ್ರಕ್ಕೆ ಈಗಾಗಲೇ ಅತ್ಯುತ್ತಮ ಪ್ರತಿಕ್ರೆಯ ಸಿಕ್ಕಿದೆ.

ಕಿರುತೆರೆ ಕಪ್ಪು ಸುಂದರಿಯ ಬದುಕು!

ಕನ್ನಡ ಕಿರುತೆರೆಯಲ್ಲಿ ಅವಕಾಶಗಳು ಬಹಳಷ್ಟಿತ್ತು ಆದರೆ ಮನಸ್ಸಿಗೆ ಇಷ್ಟವಾಗುವ ಪಾತ್ರಕ್ಕಾಗಿ ಕಾಯುತ್ತಿದ್ದೆ. ಖಳನಟಿಯಾಗಿ, ಬೇರೊಬ್ಬರಿಗೆ ಕೆಟ್ಟದ್ದನ್ನು ಬಯಸುವ ಪಾತ್ರ ಮಾಡಲು ನನಗಿಷ್ಟವಿರಲಿಲ್ಲ. ಅರಮನೆ ಗಿಳಿ ಉತ್ತಮ ಕಥೆ ಹೊಂದಿದೆ. ಮೀನಾಕ್ಷಮ್ಮನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದು ವೀಕ್ಷಕರ ಮೇಲೆ ಪ್ರಭಾವ ಬೀರುವ ಪಾತ್ರವಾಗಿದೆ. ಊರಿನವರು, ಮನೆಯವರು ಎಲ್ಲರೂ ಗೌರವಿಸುವ ವ್ಯಕ್ತಿ ಮೀನಾಕ್ಷಮ್ಮ- ಪವಿತ್ರಾ ಲೋಕೇಶ್‌, ನಟಿ.

ಅರಮನೆ ಗಿಳಿ ಧಾರಾವಾಹಿಯಲ್ಲಿ ಸಿಂಧು ಕಲ್ಯಾಣ್‌, ಮಧುಸಾಗರ್‌, ಪ್ರಕಾಶ್‌ ಅರಸ್‌, ಗಿರೀಶ್‌ ಜತ್ತಿ, ಪಲ್ಲವಿ ಶೆಟ್ಟಿ, ರೂಪ ಶಂಕರ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಗೇಶ್‌ ಕೃಷ್ಣ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದು, ಗಂಗಾಧರ್‌ ಅವರ ನಿರ್ಮಾಣವಿದೆ. ಮೇ 20 ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 9 ಗಂಟೆಗೆ ಅರಮನೆ ಗಿಳಿ ಧಾರಾವಾಹಿ ಪ್ರಸಾರವಾಗಲಿದೆ.