ಮರಳಿ ಸೀತೆ ಧಾರಾವಾಹಿಯ ಕತೆಗೆ ದೊಡ್ಡ ತಿರುವುದು ಬಂದಿದೆ. ಇದುವರೆಗೆ ತಮ್ಮ ಪತ್ನಿಯ ಹೆಸರಲ್ಲಿ ನಡೆಸುತ್ತಿರುವ ಕೌಸಲ್ಯಾ ವೃದ್ಧಾಶ್ರಮದಲ್ಲಿದ್ದ ತಾತಾ, ಈಗ ಮನೆಗೆ ಬಂದಿರುವುದು ಮೊಮ್ಮಕ್ಕಳಿಗೆ ಖುಷಿ ಕೊಟ್ಟಿದೆ. ಇಂತಹದೊಂದು ವಿಶೇಷತೆ ಹೊಂದಿದ ಪಾತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಹಿರಿಯ ನಟ ಶಿವರಾಂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಕಿರುತೆರೆ ಕಪ್ಪು ಸುಂದರಿಯ ಬದುಕು!

‘ರಾಜ್‌ ಕುಟುಂಬದ ಜತೆಗಿನ ತುಂಬಾ ಹಳೆಯದು. ಅವರದೇ ಕುಟುಂಬ ವಜ್ರೇಶ್ವರಿ ಕಂಬೈನ್ಸ್‌ ಬ್ಯಾನರ್‌ ನಿರ್ಮಾಣದಲ್ಲಿ ಮರಳಿ ಬಂದಳು ಸೀತೆ ಧಾರಾವಾಹಿ ಮೂಡಿ ಬರುತ್ತಿದ್ದು, ಅದರಲ್ಲಿ ನೀವು ಅಭಿನಯಿಸಬೇಕು ಅಂತ ನಿರ್ದೇಶಕರು ಹೇಳಿದಾಗ ಖುಷಿ ಆಯಿತು. ಅದಕ್ಕಾಗಿ ಈ ಪಾತ್ರಕ್ಕೆ ಬಣ್ಣ ಹಚ್ಚಲು ಒಪ್ಪಿಕೊಂಡೆ’ ಎನ್ನುತ್ತಾರೆ ಶಿವರಾಂ. ವಜ್ರೇಶ್ವರಿ ಕಂಬೈನ್ಸ್‌ ಎಂಟರ್‌ಪ್ರೈಸಸ್‌ ಮೂಲಕ ರಾಘವೇಂದ್ರ ರಾಜ್‌ ಕುಮಾರ್‌ ನಿರ್ಮಾಣದಲ್ಲಿ ಎಸ್‌. ಗೋವಿಂದ್‌ ‘ಮರಳಿ ಬಂದಳು ಸೀತೆ’ ಧಾರಾವಾಹಿಯನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಇದು ಪ್ರತಿ ಸೋಮವಾರದಿಂದ ಶನಿವಾರದವರೆಗೂ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತದೆ.

ಕಲರ್ಸ್ ಸೂಪರ್‌ನಲ್ಲಿ ಸೂಪರ್ ಹಿಟ್ ಹಾಸ್ಯ ಧಾರಾವಾಹಿ!