ಇನ್ನು ಮುಂದೆ ಮಧ್ಯಾಹ್ನ 12 ರಿಂದ -2 ಗಂಟೆಯವರೆಗೆ ಗೃಹಿಣಿಯರು ಬೇರೆ ಯೋಚನೆಯಿಲ್ಲದೆ, ಒಂದೆರಡು ಗಂಟೆಗಳನ್ನಾದರು ತಮಗಾಗಿ ಈ ಹೊಸ ಗೆಳತಿಯರ ಜೊತೆ ಕಳೆಯಬಹುದು. 12 ಗಂಟೆಗೆ ವಿನೂತನ ಕುಕ್ಕರೀ ಶೋ ‘ಕಿಚನ್ ದರ್ಬಾರ್’, 1 ಗಂಟೆಗೆ ‘ಶೃತಿ ಸೇರಿದಾಗ’ ಮತ್ತು 1.20ಕ್ಕೆ ‘ಯಜಮಾನಿ’ ಧಾರಾವಾಹಿಗಳು ಪ್ರಸಾರವಾಗಲಿದೆ.

 

‘ಕಿಚನ್ ದರ್ಬಾರ್’ನಲ್ಲಿ 3 ಭಾಗ ಇರಲಿದೆ. ಮೊದಲ ಭಾಗ ‘ಅತಿಥಿ-ಅಭಿರುಚಿ’. ಇದರಲ್ಲಿ ಸೆಲೆಬ್ರಿಟಿಗಳು ತಮ್ಮ ಕೈರುಚಿ ತೋರಿಸಲಿದ್ದಾರೆ. ರಾಗಿಣಿ ದ್ವಿವೇದಿ, ಪ್ರಣೀತಾ ಸುಭಾಷ್, ಸೋನು ಗೌಡ, ಕವಿತಾ ಗೌಡ, ನೀತು, ಭಾವನಾ, ನವೀನ್ ಸಜ್ಜು ಕಾಣಿಸಿಕೊಳ್ಳಲ್ಲಿದ್ದಾರೆ.ಎರಡನೇ ಭಾಗ ‘ಭಟ್ರು ಪಾಕ’ದಲ್ಲಿ ಶೆಫ್ಸ್ ರೆಸಿಪಿ ಹಂಚಿಕೊಳ್ಳಲಿದ್ದಾರೆ. ಕರ್ನಾಟಕದ ಗಲ್ಲಿಗಲ್ಲಿಯಲ್ಲಿ ಫೇಮಸ್ ಆಗಿರುವ ಊಟ, ಚಾಟ್ಸ್ ಮತ್ತು ಸ್ನ್ಯಾಕ್ಸ್ ಪರಿಚಯ ಮೂರನೇ ಭಾಗ ‘ಗಲ್ಲಿ ರುಚಿ’ಯಲ್ಲಿ.

 

ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುವ ಧಾರಾವಾಹಿ ‘ಶೃತಿ ಸೇರಿದಾಗ’ ಮುಗ್ಧ ಹುಡುಗಿ ಶೃತಿಯ ಕಥೆ. ಸೌಮ್ಯ, ವರುಣ್, ರಾಕೇಶ್ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿಗೆ ಸುಧಾಕರ್ ನಿರ್ದೇಶನವಿದೆ. ವಿರುದ್ಧ ದಿಕ್ಕಲ್ಲಿ ಚಲಿಸ್ತಿರೋ ಪುಣ್ಯ ಮತ್ತು ಆಕಾಶ್ ಸೂರ್ಯವಂಶಿ ಜೋಡಿ ಒಂದಾದ್ರೆ ಹೇಗಿರುತ್ತೆ ಅನ್ನೋ ಕಥೆ ‘ಯಜಮಾನಿ’, ಇದೇ ಆ. 12ರಿಂದ ಮಧ್ಯಾಹ್ನ 1.30ಕ್ಕೆ ಪ್ರಸಾರವಾಗಲಿದೆ. ಸನಾತನಿ, ರಕ್ಷಿತ್ ಗೌಡ ನಟಿಸುತ್ತಿದ್ದು, ಉದಯ್ ಆದಿತ್ಯ ನಿರ್ದೇಶನವಿದೆ.