‘ಮಹಾಭಾರತ’ ಕಥಾಹಂದರ ಆಧರಿಸಿ ಅದೇ ಹೆಸರಲ್ಲಿ ಮಾಡಲು ಮುಂದಾಗಿದ್ದಾರೆ. 400 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಇದರಲ್ಲಿ ಅಮೀರ್ ಖಾನ್, ರಜನೀಕಾಂತ್ ಮತ್ತು ಮೋಹನ್‌ಲಾಲ್ ಅವರನ್ನು ಬಳಸಿಕೊಳ್ಳಲು ರಾಜವೌಳಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈದ್ರಾಬಾದ್(ಫೆ.09): ಸೂಪರ್ ಸ್ಟಾರ್ ರಜನೀಕಾಂತ್, ಅಮೀರ್ ಖಾನ್ ಮತ್ತು ಮೋಹನ್ ಲಾಲ್ ದೇಶದಲ್ಲೇ ದುಬಾರಿ ಸಂಭಾವನೆ ಪಡೆಯುವ ನಟರ ಪೈಕಿ ಗುರುತಿಸಿಕೊಳ್ಳುತ್ತಾರೆ. ಸಾಮಾನ್ಯ ನಿರ್ಮಾಪಕರಿಗೆ ಇವರನ್ನು ಹಾಕಿಕೊಂಡು ಚಿತ್ರ ಮಾಡುವುದೇ ಕನಸಿನ ಮಾತು. ಅಂಥದ್ದರಲ್ಲಿ ಮೂರೂ ನಾಯಕರನ್ನು ಒಂದೇ ಚಿತ್ರದಲ್ಲಿ ಸೇರಿಸ ಚಿತ್ರ ನಿರ್ಮಿಸಲು ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜವೌಳಿ ಮುಂದಾಗಿದ್ದಾರೆ.
ನಿಜ. ರಾಜವೌಳಿ ಅವರು ‘ಮಹಾಭಾರತ’ ಕಥಾಹಂದರ ಆಧರಿಸಿ ಅದೇ ಹೆಸರಲ್ಲಿ ಮಾಡಲು ಮುಂದಾಗಿದ್ದಾರೆ. 400 ಕೋಟಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಇದರಲ್ಲಿ ಅಮೀರ್ ಖಾನ್, ರಜನೀಕಾಂತ್ ಮತ್ತು ಮೋಹನ್ಲಾಲ್ ಅವರನ್ನು ಬಳಸಿಕೊಳ್ಳಲು ರಾಜವೌಳಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಚಿತ್ರದಲ್ಲಿ ಕೃಷ್ಣ ಅಥವಾ ಕರ್ಣನ ಪಾತ್ರ ಮಾಡಲು ಅಮೀರ್ ಖಾನ್ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಬಾಹುಬಲಿ- 2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ರಾಜವೌಳಿ ಈ ಕುರಿತಂತೆ ಯಾವುದೇ ಅಕೃತ ಹೇಳಿಕೆ ನೀಡಿಲ್ಲ.
