ಮೀ ಟೂ ಆರೋಪದ ಬಳಿಕ ಸೋಷಿಯಲ್ ಮೀಡಿಯಾದಿಂದ ದೂರ ಉಳಿದ ಶೃತಿ ಹರಿಹರನ್ | ಗಿರೀಶ್ ಕಾರ್ನಾಡ್ ನಿಧನಕ್ಕೆ ಟ್ವೀಟ್‌ನಲ್ಲಿ ಸಂತಾಪ
ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸುವ ಸಲುವಾಗಿ ಮತ್ತೆ ಸೋಷಲ್ ಮೀಡಿ ಯಾಗೆ ಬಂದಿದ್ದಾರೆ ನಟಿ ಶ್ರುತಿ ಹರಿಹರನ್. ಬಹಳ ಸಮಯಗಳ ಕಾಲ ಸೋಷಲ್ ಮೀಡಿಯಾದಿಂದ ದೂರವೇ ಉಳಿದಿದ್ದ ನಟಿ, ಗಿರೀಶ್ ಕಾರ್ನಾಡ್ ನಿಧನದ ಸಲುವಾಗಿಯೇ ವಾಪಸ್ ಬಂದಿದ್ದಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಮಂಡ್ಯದ ಹೆಣ್ಣು ಸುಮಲತಾಗೆ ಇತ್ತು ಇವರ ಮೇಲೆ ಕ್ರಶ್!
‘ನಿಜವಾದ ಲೆಜೆಂಡ್‌ಗೆ ಸಂತಾಪ ಸೂಚಿಸುವ ಕಾರಣದಿಂದಲೇ ಬಹಳ ಸಮಯದ ನಂತರ ಮತ್ತೆ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದೇನೆ. ಅವರ ಜೊತೆ ಕೆಲಸ ಮಾಡುವ ಅದೃಷ್ಟ ಒಂದೇ ಒಂದು ಸಲ ನನಗೆ ದೊರಕಿತ್ತು. ಅವರ ಸರಳತೆ ಮತ್ತು ಬುದ್ಧಿವಂತಿಕೆ ನಿಜಕ್ಕೂ ನಮ್ಮಲ್ಲಿ ಅಚ್ಚರಿ ಮತ್ತು ಗಾಬರಿಯನ್ನು ಒಟ್ಟೊಟ್ಟಿಗೆ ಉಂಟು ಮಾಡುತ್ತದೆ. ಅವರು ನಮ್ಮ ಹೃದಯಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ’ ಎಂದು ಶ್ರುತಿ ಹರಿಹರನ್ ಬರೆದುಕೊಂಡಿದ್ದಾರೆ.
’ಬ್ಯೂಟಿಫುಲ್’ ಮನಸಿನ ಹುಡುಗಿನ ಬ್ಯೂಟಿಫುಲ್ ಸೀರೆ ಫೋಟೋಗಳು
ಮೀ ಟೂ ವಿವಾದದ ನಂತರ ಇದ್ದಕ್ಕಿದ್ದಂತೆ ಶೃತಿ ಹರಿಹರನ್ ಕಾಣೆಯಾಗಿದ್ದರು. ಅಷ್ಟಾಗಿ ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಗಿರೀಶ್ ಕಾರ್ನಾಡ್ ಸಾವಿಗೆ ಸಂತಾಪ ಸೂಚಿಸುವ ಮೂಲಕ ಟ್ವಿಟರ್ ಗೆ ವಾಪಸ್ಸಾಗಿದ್ದಾರೆ.
ಶೃತಿ ಹರಿಹರನ್ ತಾಯಿಯಾಗುತ್ತಿದ್ದಾರೆ. ಹಾಗಾಗಿ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
