Asianet Suvarna News Asianet Suvarna News

ಹೀರೋಗಳ ಮಧ್ಯೆ ಸೂಪರ್ ಸ್ಟಾರ್ ಆಗಿ ಮಿಂಚಿದ ಶ್ರೀದೇವಿ

50ರ ವಯಸ್ಸಿನಲ್ಲಿಯೂ ನಾಯಕ ನಟನೊಬ್ಬ ಹೀರೋ ಆಗಿಯೇ ಮಿಂಚುವುದು ಸಾಮಾನ್ಯ. ಆದರೆ, 50ರಲ್ಲಿಯೂ ನಾಯಕಿಯಾಗಿ ತನ್ನ ಪ್ರತಿಭೆಯನ್ನು ತೋರಿಸಿದಾಕೆ ಶ್ರೀದೇವಿ.

Sridevi was a hero among heroes

ಬೆಂಗಳೂರು: 50ರ ವಯಸ್ಸಿನಲ್ಲಿಯೂ ನಾಯಕ ನಟನೊಬ್ಬ ಹೀರೋ ಆಗಿಯೇ ಮಿಂಚುವುದು ಸಾಮಾನ್ಯ. ಆದರೆ, 50ರಲ್ಲಿಯೂ ನಾಯಕಿಯಾಗಿ ತನ್ನ ಪ್ರತಿಭೆಯನ್ನು ತೋರಿಸಿದಾಕೆ ಶ್ರೀದೇವಿ. ಮಗಳು ಜಾಹ್ನವಿಯನ್ನು ಬಾಲಿವುಡ್ ಜಗತ್ತಿಗೆ ಪರಿಚಯಿಸುತ್ತಿದ್ದು, ಮಗಳ ಮೊದಲ ಚಿತ್ರ 'ದಡಕ್'ನ ಮೊದಲ ಪೋಸ್ಟರ್‌ವೊಂದನ್ನು ತಮ್ಮ ಟ್ವೀಟರ್ ಪೇಜಿನಲ್ಲಿ ಪೋಸ್ಟ್ ಮಾಡಿದ್ದರು.

ಅನೇಕ ದಕ್ಷಿಣ ಭಾರತೀಯ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಶ್ರೀದೇವಿ. ಸೌಂದರ್ಯ ಮಾತ್ರವಲ್ಲ, ತಮ್ಮ ಮನೋಜ್ಞ ಅಭಿನಯನದಿಂದಲೂ ಚಿತ್ರ ರಸಿಕರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದು, ಈ ನಟಿ, ತಾನು ಅತ್ತು, ತಾನೂ ನಕ್ಕು, ಮತ್ತೊಬ್ಬರನ್ನು ಅಳಿಸಿ, ನಗಿಸಿದವರು.

'ಏ ಜಿಂದಗಿ ಗಲೆ ಲಗಾಲೇ....ಹಮ್ ನೇ ಭೀ ತೆರೆ ಏಕ್ ಹರ್ ಗಮ್ ಕೋ ಗಲೇ ಸೆ ಲಗಾಯೆ ಹೇ ಹೈನಾ..?' 'ಓ ಜೀವನವೇ ನನ್ನನ್ನು ಅಪ್ಪಿಕೋ...ನಾನೂ ನೀನು ಕೊಟ್ಟ ದುಃಖಗಳನ್ನೆಲ್ಲ ಅಪ್ಪಿಕೊಂಡಿದ್ದೇನೆ ಅಲ್ವಾ?' ಎಂಬ ಸದ್ಮಾ ಚಿತ್ರದ ಹಾಡು ಈ ನಟಿಯ ಬದುಕಿಗೂ ಸಂಬಂಧ ಕಲ್ಪಿಸಿದ್ದು, ದುರಂತ.

ಸದ್ಮಾ, ಲಮ್ಹೇ, ಚಾಂದನಿ, ಮಿ. ಇಂಡಿಯಾ, ಜುದಾಯ್, ನಗ್ಮಾ, ಲಾಡ್ಲಾ, ಖುದಾ ಘವಾ ಮುಂತಾದವು ಶ್ರೀದೇವಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟ ಚಿತ್ರಗಳು. 

ಸುಮಾರು ಒಂದೂವರೆ ದಶಕದ ಬ್ರೇಕ್ ನಂತರ 'ಇಂಗ್ಲಿಷ್ ವಿಂಗ್ಲಿಷ್' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಮರು ಎಂಟ್ರಿ ನೀಡಿದ ಶ್ರೀದೇವಿ, ಮಧ್ಯಮ ವರ್ಗದ ಮಹಿಳೆಯೊಬ್ಬಳು ಇಂಗ್ಲಿಷ್ ಬಾರದೇ, ಆತ್ಮವಿಶ್ವಾಸದ ಕೊರತೆಯಿಂದ ಅವಮಾನ ಅನುಭವಿಸುವ ಕಂದಾ ಹಂದರವುಳ್ಳ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ಭಾಷೆ ಬಾರದೇ ವಿದೇಶಕ್ಕೆ ತೆರಳಿ, ಅಲ್ಲಿ ಇಂಗ್ಲಿಷ್ ಕಲಿತು, ತನ್ನ ಸಾಮಾರ್ಥ್ಯವನ್ನು ತೋರಿಸುವ ಈ ಮಹಿಳೆಯ ಕಥೆ ಭಾರತೀಯ ಹೆಣ್ಣು ಮಕ್ಕಳ ವಿಶ್ವಾಸ ಹೆಚ್ಚಿಸಿತ್ತು. ಮಾಮ್ ಈ ಎವರ್ ಗ್ರೀನ್ ನಟಿ ನಟಿಸಿದ ಕಡೆಯ ಚಿತ್ರ.

ಗ್ಲಾಮರಸ್ ನಟಿಯಾಗಿ ಮಾತ್ರವಲ್ಲದೇ, ಭಾರತೀಯ ಸಂಪ್ರದಾಯಸ್ಥ ಹೆಣ್ಣಾಗಿಯೂ ಈಕೆ ತೋರಿದ ಅಭಿನಯ ಮನಮುಟ್ಟುವಂತೆ ಇರುತ್ತಿತ್ತು. ತಮ್ಮ ಅಭಿನಯದಿಂದಲೇ ವೀಕ್ಷಕರನ್ನು ನಗೆಗಡಲಲ್ಲಿ ಮುಳುಗಿಸುತ್ತಿದ್ದ, ಶ್ರೀದೇವಿ ತಮ್ಮ ಅಭಿನಯದಿಂದಲೇ ಎಂಥವರ ಕಣ್ಣಲ್ಲಿಯೂ ನೀರು ತರಿಸುತ್ತಿದ್ದರು. 
 

Follow Us:
Download App:
  • android
  • ios