ಬಲವಂತವಾಗಿ ನನ್ನ ಜೊತೆ ಸೆಕ್ಸ್ ಮಾಡಿದ : ಖ್ಯಾತ ನಿರ್ಮಾಪಕನ ಪುತ್ರನ ವಿರುದ್ಧ ನಟಿ ಆರೋಪ

First Published 10, Apr 2018, 3:58 PM IST
Sri reddy top producers son forced me to have sex in the studio
Highlights

ಆದರೆ ನಿರ್ಮಾಪಕರು ಹಾಗೂ ಆತನ ಪುತ್ರನ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.

ಹೈದರಾಬಾದ್(ಏ.10): ಎರಡು ದಿನಗಳ ಹಿಂದಷ್ಟೆ ವಾಣಿಜ್ಯ ಮಂಡಳಿ ಮುಂದೆ ಅರೆಬೆತ್ತಲೆಯಾಗಿ ದೇಶಾದ್ಯಂತ ಸುದ್ದಿ ಮಾಡಿದ್ದ ತೆಲುಗು ನಟಿ ಶ್ರೀರೆಡ್ಡಿ ತೆಲುಗಿನ ಖ್ಯಾತ ನಿರ್ಮಾಪಕನ ಪುತ್ರರ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

ಈ ಬಗ್ಗೆ ಇಂಡಿಯಾ ಟುಡೆ ಆಂಗ್ಲ ವೆಬ್'ಸೈಟ್ ವರದಿ ಮಾಡಿದ್ದು, ಸರ್ಕಾರಿ ಸ್ಟೂಡಿಯೋಗೆ ಎಳೆದೋಯ್ದ ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರ ಪುತ್ರ ಬಲವಂತವಾಗಿ ನನ್ನ ಜೊತೆ ಸೆಕ್ಸ್ ಮಾಡಿದ. ಆದರೆ ನಿರ್ಮಾಪಕರು ಹಾಗೂ ಆತನ ಪುತ್ರನ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.

ನಾನು ಆತನ ಜೊತೆ ಸಿನಿಮಾ ಸಂಬಂಧವಾಗಿ ಮಾತನಾಡಲು ತೆರಳಿದ್ದೆ. ಆದರೆ ನನ್ನನ್ನು ಕರೆದುಕೊಂಡು ಹೋಗಿದ್ದು ಕಾಮಕ್ರೀಡೆಗೆ ಬಳಸಿಕೊಳ್ಳಲು ಎಂದು. ಸ್ಟುಡಿಯೋಗಳು ಇತ್ತೀಚಿಗೆ ವೇಶ್ಯಾಗೃಹಗಳಾಗಿ ಬದಲಾಗುತ್ತಿವೆ. ಉತ್ತರ ಭಾರತದ ನಟಿಯರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಕಾರಣ ಅವರು ಸೆಕ್ಸ್'ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕಳೆದ 10-15 ವರ್ಷಗಳಿಂದ ಅವರೆ ನಾಯಕಿರಾಗುತ್ತಿರುವುದಕ್ಕೆ ನಿರ್ಮಾಪಕರೊಂದಿಗೆ ಹೊಂದಾಣಿಕೆಯೆ ಪ್ರಮುಖ ಕಾರಣವಾಗಿದೆ' ಎಂದು ಆರೋಪಿಸಿದ್ದಾರೆ.

loader