ಕೆಲ ದಿನಗಳ ಹಿಂದಷ್ಟೆ ವಾಣಿಜ್ಯ ಮಂಡಳಿ ಮುಂದೆ ಅರೆಬೆತ್ತಲೆಯಾಗಿ ದೇಶಾದ್ಯಂತ ಸುದ್ದಿ ಮಾಡಿದ್ದ ಶ್ರೀ ರೆಡ್ಡಿ, ಇದೀಗ ಮತ್ತೊಂದು ವಿಚಾರವನ್ನು ಹೊರಹಾಕಿದ್ದಾರೆ.
ಹೈದರಾಬಾದ್: ಕೆಲ ದಿನಗಳ ಹಿಂದಷ್ಟೆ ವಾಣಿಜ್ಯ ಮಂಡಳಿ ಮುಂದೆ ಅರೆಬೆತ್ತಲೆಯಾಗಿ ದೇಶಾದ್ಯಂತ ಸುದ್ದಿ ಮಾಡಿದ್ದ ಶ್ರೀ ರೆಡ್ಡಿ, ಇದೀಗ ಮತ್ತೊಂದು ವಿಚಾರವನ್ನು ಹೊರಹಾಕಿದ್ದಾರೆ.
ತೆಲಗು ಚಿತ್ರ ನಿರ್ದೇಶಕ ಸುರೇಶ್ ಬಾಬು ಪುತ್ರ ಹಾಗೂ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್, ಸರ್ಕಾರಿ ಸ್ಟುಡಿಯೊವೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ಶ್ರೀರೆಡ್ಡಿ ಆರೋಪಿಸಿದ್ದರು.
ಇದೀಗ ಅಭಿರಾಮ್ ಹಾಗೂ ಇತರೆ ನಟರೊಂದಿಗೆ ಅವರು ಮಾಡಿರುವ ಅತ್ಯಂತ ಸೀಕ್ರೆಟ್ಸ್ ಚಾಟ್ಸ್’ಗಳ ಸ್ಕ್ರೀನ್ ಶಾಟ್’ಗಳನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ.
ಅತ್ಯಂತ ಖಾಸಗಿ ವಿಚಾರಗಳ ಬಗ್ಗೆ ವಾಟ್ಸಾಪ್’ನಲ್ಲಿ ಚಾಟ್ ಮಾಡಿರುವುದನ್ನು ಶ್ರೀ ರೆಡ್ಡಿ ಸ್ಕ್ರೀನ್ ಶಾಟ್ ತೆಗೆದು ಬಹಿರಂಗ ಮಾಡಿದ್ದಾರೆ.
ಈ ಚಾಟ್’ನಲ್ಲಿ ಸೆಕ್ಸ್, ವರ್ಜಿನಿಟಿ, ಮಾಜಿ ಸಂಗಾತಿಗಳ ಬಗ್ಗೆಯೂ ಕೂಡ ಮಾತುಕತೆ ನಡೆಸಲಾಗಿದೆ. ಸದ್ಯ ಶ್ರೀ ರೆಡ್ಡಿ ಪೋಸ್ಟ್ ಮಾಡಿರುವ ಚಾಟಿಂಗ್ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
