ಚೆನ್ನೈ(ಆ. 17)   ಕೊರೋನಾ ಕಾರಣಕ್ಕೆ  ಚೆನ್ನೈ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಪುತ್ರ ಎಸ್‌ಪಿ ಚರಣ್ ತಿಳಿಸಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿರುವ ತಾಯಿ ಸಹ ಚೇತರಿಕೆ ಕಾಣುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೊರೋನಾ ಸೋಂಕಿನ ಕಾರಣಕ್ಕೆ ಹಿರಿಯ ಗಾಯಕ ಆ.  5 ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ. 13  ರಂದು  ಹಿರಿಯ ಗಾಯಕನ ಆರೋಗ್ಯ ಗಂಭಿರವಾಗಿದೆ ಎಂಬ ವರದಿಗಳು ಬಂದಿದ್ದವು.

ಕೊರೋನಾ ವೈರಸ್; ರಾಜ್ಯದಲ್ಲಿ ರೂಲ್ಸ್ ಬದಲು

ಆಸ್ಪತ್ರೆಯ ಮೂರನೇ ಮಹಡಿಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯವರನ್ನು ಆರನೇ ಮಹಡಿಯ ವಿಶೇಷ ಐಸಿಯು ಘಟಕಕ್ಕೆ ಸ್ಥಳಾಂತರಿಸಲಾಗಿದೆ. ತಂದೆಯವರು ಸ್ವಲ್ಪ ಚಲನವಲನ ತೋರಿಸಿದ್ದು ವೈದ್ಯರಿಗೆ ಕೈ ಸನ್ನೆ ಮೂಲಕ ಸಂವಹನ ಮಾಡುತ್ತಿದ್ದಾರೆ. ವೈದ್ಯರನ್ನು ಗುರುತಿಸುವ ಸ್ಥಿತಿಯಲ್ಲಿದ್ದಾರೆ ಆದರೆ ಇನ್ನೂ ಕೂಡ ಜೀವರಕ್ಷಕ ಸಾಧನದಲ್ಲಿದ್ದಾರೆ. ಆದರೆ ಸುಲಭವಾಗಿ ಉಸಿರಾಡಲು ಸಾಧ್ಯವಾಗುತ್ತಿದೆ. ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ತಾಯಿ ಆರೋಗ್ಯವೂ ಸುಧಾರಣೆಯಾಗಿದ್ದು ಮಂಗಳವಾರ ಅಥವಾ ಬುಧವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ತಂದೆ ಮೊದಲಿನಂತೆ ಆಗಲು ಕೆಲ ಸಮಯ ಹಿಡಿಯಬಹುದು. ಆದರೆ ನಿಮ್ಮ ನಮ್ಮೆಲ್ಲರ ಪ್ರಾರ್ಥನೆ ಅವರೊಂದಿಗೆ ಇದೆ ಎಂದು  ಹೇಳಿದ್ದಾರೆ. ಒಳ್ಳೆಯ ಮನಸ್ಸಿನಿಂದ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದಿದ್ದಾರೆ.