ಬೆಂಗಳೂರು, (ಆ.16): ಇನ್ಮುಂದೆ ಕೊರೋನಾ ಸೋಂಕಿನ ಪ್ರಕರಣ ಕಂಡುಬಂದಂತ ಮನೆಗಳನ್ನು ಅಷ್ಟೇ ಸೀಲ್ ಡೌನ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಇದುವರೆಗೆ ಕೊರೋನಾ ಪ್ರಕರಣ ಪತ್ತೆಯಾದಂತ ಏರಿಯಾ, ರಸ್ತೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುತ್ತಿತ್ತು. ಆದ್ರೆ, ಇನ್ಮುಂದೆ ಕೊರೋನಾ ಪ್ರಕರಣ ಪತ್ತೆಯಾದಂತ ಮನೆಯನ್ನಷ್ಟೇ ಸೀಲ್ ಡೌನ್ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಭಯಬೇಡ, ಕೊರೋನಾ ಗಾಳಿಯಲ್ಲಿ ಹರಡೋದು ಅಷ್ಟು ಸುಲಭವಲ್ಲ..!

ಈ ಹಿಂದೆ ಕೊರೋನಾ ಪ್ರಕರಣವಾದ ಮನೆಯಿಂದ ಸುತ್ತಮುತ್ತ 100 ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಲಾಗಿತ್ತು. ಅಲ್ಲಿ ಫುಲ್ ಸೀಲ್ ಡೌನ್ ಮಾಡಲಾಗುತ್ತಿತ್ತು.

ಆದ್ರೆ, ಇದೀಗ ಸಚಿವ ಅಶೋಕ್ ಅವರು ಹೇಳಿದಂತೆ ಸೋಂಕು ಪತ್ತೆಯಾದ ಮನೆ ಮಾತ್ರ ಸೀಲ್ ಮಾಡಲಾಗುತ್ತದೆ.