ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ 'ಪ್ರಶಸ್ತಿಯನ್ನು ದೇಶದ ಸೈನಿಕರಿಗೆ ವಿಧೇಯತೆಯಿಂದ ಸಮರ್ಪಿಸುವುದಾಗಿ ಹೇಳಿದ್ದಾರೆ.
ಪಣಜಿ(ನ.20): ವಿಶ್ವವಿಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ‘ಸೆಂಟಿನರಿ ಅವಾರ್ಡ್ ಫಾರ್ ಇಂಡಿಯನ್ ಫಿಲಂ ಪರ್ಸನಾಲಿಟಿ ಆಫ್ ದ ಇಯರ್’ ಎಂಬ ಗೌರವ ಪ್ರದಾನ ಮಾಡಲಾಗಿದೆ.
ಗೋವಾ ರಾಜಧಾನಿ ಪಣಜಿಯಲ್ಲಿ ಇಂದು ಆರಂಭವಾದ 47ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಎಂ.ವೆಂಕಯ್ಯ ನಾಯ್ಡು 70 ವರ್ಷದ ಹಿರಿಯ ಗಾಯಕಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ 'ಪ್ರಶಸ್ತಿಯನ್ನು ದೇಶದ ಸೈನಿಕರಿಗೆ ವಿಧೇಯತೆಯಿಂದ ಸಮರ್ಪಿಸುವುದಾಗಿ ಹೇಳಿದ್ದಾರೆ. ‘‘ನೀವು ಇಲ್ಲದೆ ನಾವು ಇರಲು ಸಾಧ್ಯವಿಲ್ಲ,’’ ಎಂದು ಅವರು ತಾವು ತಮ್ಮ ಹೆತ್ತವರಿಗೆ, ಗುರುವಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು 'ಸಿನಿಮಾದಲ್ಲಿನ ಅಶ್ಲೀಲತೆ ಭಾರತೀಯ ಸಮಾಜಕ್ಕೆ ಧಕ್ಕೆ ತರುತ್ತಿದೆ. ನಾವು ಹಿಂದಿನ ಮೌಲ್ಯಯುತ ಸಿನಿಮಾಗಳತ್ತ ಹೊರಳಬೇಕಾಗಿದೆ ಎಂದರು.
