ನೀನು ಆರೋಗ್ಯವಾಗಿರುವೆಯೆಂದು ಕೇಳಿ ನನಗೆ ಸಂತೋಷವಾಗಿದೆ. ಚೇತರಿಸಿಕೊಳ್ಳಲೆಂದು ನನ್ನ ಶುಭ ಹಾರೈಕೆ. ಬೇಗನೆ ಗುಣಮುಖನಾಗು ಗೆಳೆಯ- ಸುದೀಪ್
ಬೆಂಗಳೂರು[ಸೆ.24]: ರಸ್ತೆ ಅಪಘಾತದಿಂದ ಗಾಯಗೊಂಡು ಮೈಸೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇಗ ಗುಣಮುಖರಾಗಲು ಆಪ್ತಮಿತ್ರ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಟ್ವೀಟ್ ಮಾಡಿರುವ ಸುದೀಪ್ 'ನೀನು ಆರೋಗ್ಯವಾಗಿರುವೆಯೆಂದು ಕೇಳಿ ನನಗೆ ಸಂತೋಷವಾಗಿದೆ. ಚೇತರಿಸಿಕೊಳ್ಳಲೆಂದು ನನ್ನ ಶುಭ ಹಾರೈಕೆ. ಬೇಗನೆ ಗುಣಮುಖನಾಗು ಗೆಳೆಯ’ ಎಂದಿದ್ದಾರೆ.
ನವರಸನಾಯಕ ಜಗ್ಗೇಶ್ ಕೂಡ ’ಕೋಟ್ಯಂತರ ಅಭಿಮಾನಿಗಳು ಹಾಗೂ ರಾಯರ ಕೃಪೆಯಿಂದ ಕ್ಷೇಮವಾಗಿದ್ದು, ಯಾರಕಣ್ಣು ತಾಕದೆ ಸುಖವಾಗಿ ಬಾಳಿ.. ಎಂದು ಟ್ವೀಟ್ ಮಾಡಿದ್ದಾರೆ.
