ಸೋನುಗೆ ಸೂದ್ ಸರಿಸಾಟಿ, ಸಂಕಷ್ಟದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಆಪದ್ಬಾಂಧವ
ಮುಂದುವರಿದ ಸೋನು ಸೂದ್ ಮಾದರಿ ಕೆಲಸ/ ಕಿರ್ಗಿಸ್ತಾನದಿಂದ ವಿದ್ಯಾರ್ಥಿಗಳು ತವರಿಗೆ/ ವಿಮಾನ ಸೇವೆ ಕಲ್ಪಿಸಿಕೊಟ್ಟ ಬಾಲಿವುಡ್ ನಟ/ ವಲಸೆ ಕಾರ್ಮಿಕರಿಗೆ ದೇವರಾಗಿದ್ದ ಸೋನು ಸೂದ್
ನವದೆಹಲಿ(ಜು. 24) ಈ ಕೊರೋನಾ ಕಾಲದಲ್ಲಿ ನಿಜವಾದ ಹೀರೋ ಆಗಿ ಗುರುತಿಸಿಕೊಂಡವರು ಸೋನು ಸೂದ್. ಸೋನು ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಕೊರೋನಾ ಕಾರಣಕ್ಕೆ ಕಿರ್ಗಿಸ್ತಾನದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳನ್ನು ತವರಿಗೆ ವಾಪಸ್ ಕರೆಸುವ ಕೆಲಸ ಸೂದ್ ಮಾಡಿದ್ದಾರೆ. ಏರ್ ಲೈನ್ ಒಂದರ ಸಹಕಾರ ಪಡೆದುಕೊಂಡು ಸುಮಾರು 1,500 ವಿದ್ಯಾರ್ಥಿಗಳಿಗೆ ಸೂದ್ ನೆರವು ನೀಡಿದ್ದಾರೆ.
ಸೋಶಿಯಲ್ ಮೀಡಿಯಾ ಸೆಸ್ಸೆಶನ್ ಅಜ್ಜಿಗೆ ಸೋನು ಸೂದ್ ಬಿಗ್ ಆಫರ್
ಕಿರ್ಗಿಸ್ತಾನದಿಂದ ವಾರಣಾಸಿಗೆ ಮೊದಲ ವಿಮಾನ ಹೊರಟಿದೆ. ಈ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಸ್ಪೈಸ್ ಜೆಟ್ ಗೂ ನನ್ನ ಧನ್ಯವಾದ ಎಂದು ಸೂದ್ ತಿಳಿಸಿದ್ದಾರೆ. 135 ಜನರನ್ನು ಹೊತ್ತ ವಿಮಾನ ಬಂದಿದೆ. ವಿಮಾನಯಾನ ಸಂಸ್ಥೆ ಸಹ ಟ್ವಿಟ್ ಮಾಡಿ ಸೂದ್ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದೆ.
ವಲಸೆ ಕಾರ್ಮಿಕರ ನೆರವಿಗೆ ಲಾಕ್ ಡೌನ್ ಸಂದರ್ಭ ನಿಂತಿದ್ದ ಸೂದ್ ಸಾವಿರಾರು ಕಾರ್ಮಿಕರನ್ನು ಅವರ ತವರಿಗೆ ಬಸ್ ಮತ್ತು ರೈಲಿನ ಮೂಲಕ ಕಳುಹಿಸಿ ಕೊಟ್ಟಿದ್ದರು. ಅವರಿಗೆ ಆಹಾರದ ವ್ಯವಸ್ಥೆ ಸಹ ಮಾಡಿದ್ದರು. ವಲಸೆ ಕಾರ್ಮಿಕರಿಗೆ ಸಂಬಂಧಿಸಿ ಸೂದ್ ಪುಸ್ತಕವೊಂದನ್ನು ಸಹ ಬರೆಯುತ್ತಿದ್ದಾರೆ.