ಐಎಎಸ್ ಅಧಿಕಾರಿಗಳ ಬಳಿ ಸೋನು ಗೌಡ ತರಬೇತಿ

entertainment | Saturday, February 3rd, 2018
Suvarna Web Desk
Highlights

ಮಾರ್ಚ್ ಮೊದಲ ವಾರದಿಂದ ಚಿತ್ರೀಕರಣ ಮಾಡುವುದಕ್ಕೆ ನಿಖಿಲ್ ಮಂಜು ಅವರು ನಿರ್ಧಾರ ಮಾಡಿದ್ದಾರೆ. ಆದರೆ, ಇದನ್ನು ಕಮರ್ಷಿಯಲ್ಲಾಗಿ ಮಾಡುವ ಜತೆಗೆ ಪಕ್ಕಾ ಅಕಾಡೆಮಿಕ್ ಆಗಿಯೂ ಇರಬೇಕು. ಎಲ್ಲೂ ಲಾಜಿಕ್ ಮಿಸ್ ಆಗಬಾರದು ಎನ್ನುವ ಕಾರಣಕ್ಕೆ ಶಾಲಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೋನು ಗೌಡ ಅವರಿಗೆ ಪೂರ್ವ ತರಬೇತಿ ನೀಡುತ್ತಿದ್ದಾರೆ

ಸೋನು ಗೌಡ ಈಗೇನು ಮಾಡುತ್ತಿದ್ದಾರೆ? ಅವರು ಸದ್ಯಕ್ಕೆ ಐಎಎಸ್ ತರಬೇತಿ ಮಾಡಿಕೊಂಡು ಬಂದಿದ್ದಾರೆ. ಹಾಗಂತ ಅವರು ಐಎಎಸ್ ಓದುತ್ತಿಲ್ಲ. ನಿಖಿಲ್ ಮುಂಜು ನಿರ್ದೇಶನದಲ್ಲಿ ‘ಶಾಲಿನಿ ಐಎಎಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಂದಹಾಗೆ ಇದು ಶಾಲಿನಿ ರಜನೀಶ್ ಜೀವನ ಪುಟಗಳನ್ನು ಆಧರಿಸಿ ಮಾಡುತ್ತಿರುವ ಸಿನಿಮಾ. ತುಂಬಾ ಹಿಂದೆಯೇ ಮುಹೂರ್ತ ಆಗಿದ್ದ ಈ ಚಿತ್ರಕ್ಕೆ ಇನ್ನೂ ಪಕ್ಕಾ ಚಿತ್ರೀಕರಣ ಶುರುವಾಗಿಲ್ಲ. ಅದರಲ್ಲೂ ಶಾಲಿನಿ ಪಾತ್ರದಲ್ಲಿ ನಟಿಸಬೇಕಿದ್ದ ಸೋನು ಗೌಡ ಕೂಡ ಇನ್ನೂ ಈ ಚಿತ್ರಕ್ಕೆ ಪಾಲ್ಗೊಂಡಿಲ್ಲ. ಅದಕ್ಕೆ ಕಾರಣ ಪೂರ್ವ ತರಬೇತಿ.

ಐಎಎಸ್ ಅಧಿಕಾರಿಗಳ ಜತೆ ತರಬೇತಿ

ಮಾರ್ಚ್ ಮೊದಲ ವಾರದಿಂದ ಚಿತ್ರೀಕರಣ ಮಾಡುವುದಕ್ಕೆ ನಿಖಿಲ್ ಮಂಜು ಅವರು ನಿರ್ಧಾರ ಮಾಡಿದ್ದಾರೆ. ಆದರೆ, ಇದನ್ನು ಕಮರ್ಷಿಯಲ್ಲಾಗಿ ಮಾಡುವ ಜತೆಗೆ ಪಕ್ಕಾ ಅಕಾಡೆಮಿಕ್ ಆಗಿಯೂ ಇರಬೇಕು. ಎಲ್ಲೂ ಲಾಜಿಕ್ ಮಿಸ್ ಆಗಬಾರದು ಎನ್ನುವ ಕಾರಣಕ್ಕೆ ಶಾಲಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೋನು ಗೌಡ ಅವರಿಗೆ ಪೂರ್ವ ತರಬೇತಿ ನೀಡುತ್ತಿದ್ದಾರೆ. ಅದರಲ್ಲೂ ಐಎಎಸ್ ಅಧಿಕಾರಿಗಳ ಜತೆ ಎಂಬುದು ವಿಶೇಷ. ಶಾಲಿನಿ ರಜನೀಶ್ ಅವರಿಗೆ ಗೊತ್ತಿರುವ ಐಎಎಸ್ ಅಧಿಕಾರಿಗಳನ್ನು ಭೇಟಿ ಮಾಡುವ ಜತೆಗೆ ಅವರ ಕೆಲಸದ ರೀತಿ ಹೇಗಿರುತ್ತದೆ,  ಐಎಎಸ್ ಹುದ್ದೆಗಳನ್ನು ನಿರ್ವಹಿಸುತ್ತಿರುವ ವರ ಮ್ಯಾನರಿಸಂ, ಬಾಡಿ ಲ್ಯಾಂಗ್ವೇಜ್, ಅವರ ಅಧಿಕಾರದ ವ್ಯಾಪ್ತಿ, ಆಡಳಿತ ಯಂತ್ರಾಂಗದ ಜತೆಗೆ ಅವರ ಸಂಬಂಧಗಳೇನು ಇತ್ಯಾದಿ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುಕ್ಕಾಗಿಯೇ ಕಳೆದ ಎರಡು ದಿಗಳಿಂದ ಸೋನು ಗೌಡ ಅವರು ರಿಯಲ್ ಐಎಎಸ್ ಅಧಿಕಾರಿಗಳನ್ನು ಹಿಂಬಾಲಿಸುತ್ತಿದ್ದಾರೆ.

‘ಎಂಎಸ್ ಧೋನಿ: ಅನ್‌ಟೋಲ್ಡ್  ಸ್ಟೋರಿ’ ಚಿತ್ರದಲ್ಲಿ ಧೋನಿ ಪಾತ್ರ ಮಾಡುವ ಮುನ್ನ ಈ ಚಿತ್ರದ ನಾಯಕ ಸುಶಾಂತ್ ಸಿಂಗ್ ರಜಪೂತ್ ಧೋನಿಯನ್ನು ಪ್ರತಿದಿನ ಹಿಂಬಾಲಿಸಿಕೊಂಡು ಹೋಗುತ್ತಿದ್ದರು. ‘ಧೀರನ್ ಅಧಿಗಾರಂ ಒಂಡ್ರು’ ಚಿತ್ರದಲ್ಲಿ ನಟಿಸುವ ಮುನ್ನ ನಾಯಕ ನಟ ಕಾರ್ತಿ ಪೊಲೀಸ್ ಅಧಿಕಾರಗಳ ಜೊತೆ ತರಬೇತಿ ಪಡೆದುಕೊಂಡಿದ್ದರು. ಅದೇ ಥರ ಸೋನು ಗೌಡ ಅವರು ಶಾಲಿನಿ ರಜಿನೀಶ್ ಪಾತ್ರದಲ್ಲಿ ಜೀವಿಸಲು ಅವರೊಂದಿಗೆ ಒಂದು ದಿನಾ ಪೂರ್ತಿ ಕಳೆದಿದ್ದಾರೆ. ಅಂದಹಾಗೆ ಇಲ್ಲಿ ಸೋನು ಗೌಡ ಜತೆ ನಾಯಕನಾಗಿ ರೋಜರ್ ನಾರಾಯಣ ನಟಿಸುತ್ತಿದ್ದಾರೆ.

ಮೊದಲಿನಂತೆ ನಾನು ಬೇರೆ ಭಾಷೆಗಳತ್ತ ನೋಡುತ್ತಿಲ್ಲ. ಕನ್ನಡದಲ್ಲೇ ಒಳ್ಳೆಯ ಅವಕಾಶಗಳು ಇವೆ. ‘ಶಾಲಿನಿ ಐಎಎಸ್’ ಚಿತ್ರಕ್ಕೆ ವಿಶೇಷವಾಗಿ ವರ್ಕ್ ಶಾಪ್ ಮಾಡಿದ್ದಾರೆ. ಈ ನಡುವೆ ನನ್ನ ತಂಗಿ ನೇಹ ಅವರ ಮದುವೆ ಸಂಭ್ರಮದಲ್ಲಿ ದ್ದೇನೆ. ಸದ್ಯಕ್ಕೆ ನಿಖಿಲ್ ಮಂಜು ನಿರ್ದೇ ಶನದ ಚಿತ್ರಕ್ಕೆ ರೆಡಿಯಾಗುತ್ತಿದ್ದೇನೆ.

- ಸೋನು ಗೌಡ

Comments 0
Add Comment

    ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ, ನಿಜವಾದ ಅರ್ಥ?

    entertainment | Friday, May 11th, 2018
    Suvarna Web Desk
    3:00