ಎಲ್ಲೇ ಇದ್ದರೂ ದಿನಕ್ಕೆ ಒಂದು ಬಾರಿ ಒಂದಾಗುತ್ತಾರೆ ಈ ನವ ಜೋಡಿಗಳು!

First Published 31, Jul 2018, 4:54 PM IST
Sonam Kapoor's Husband Anand Ahuja Explains Their Idea Of Romance In Long-Distance Marriage
Highlights

ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮದುವೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂತು. ಈ ಮೂರು ತಿಂಗಳಲ್ಲಿ ಅವರು ಒಬ್ಬರನ್ನೊಬ್ಬರು ಎಷ್ಟು ಹಚ್ಚಿಕೊಂಡಿದ್ದಾರೆ ಎಂದರೆ, ಒಮ್ಮೆಯೂ ಅವರು ಬೇರೆ ಬೇರೆಯಾಗಿ ಊಟ ಮಾಡಿಲ್ಲವಂತೆ. ಹೀಗಂತ ಹೇಳಿಕೊಂಡಿರುವುದು ಸ್ವತಃ ಆನಂದ್ ಅಹುಜಾ.

ಬೆಂಗಳೂರು (ಜು. 31): ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮದುವೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂತು. ಈ ಮೂರು ತಿಂಗಳಲ್ಲಿ ಅವರು ಒಬ್ಬರನ್ನೊಬ್ಬರು ಎಷ್ಟು ಹಚ್ಚಿಕೊಂಡಿದ್ದಾರೆ ಎಂದರೆ, ಒಮ್ಮೆಯೂ ಅವರು ಬೇರೆ ಬೇರೆಯಾಗಿ ಊಟ ಮಾಡಿಲ್ಲವಂತೆ. ಹೀಗಂತ ಹೇಳಿಕೊಂಡಿರುವುದು ಸ್ವತಃ ಆನಂದ್ ಅಹುಜಾ.

ಅರೇ, ಇದು ಹೇಗೆ ಸಾಧ್ಯ, ಸೋನಂ ಶೂಟಿಂಗ್ ಅಂತ ಹೊರಗೆ ಹೋದಾಗ, ಆನಂದ್ ತಮ್ಮ ಕೆಲಸಕ್ಕೆ ಹೊರೆಗೆ ಹೋದಾಗ ಒಟ್ಟಿಗೆ ಊಟ ಮಾಡಲು ಎಲ್ಲಿ ಸಾಧ್ಯವಾಗುತ್ತದೆ? ಇದು ಹಸಿ ಸುಳ್ಳು ಎಂದುಕೊಂಡರೆ ನಿಮ್ಮ ಕಲ್ಪನೆ ತಪ್ಪು. ಯಾಕೆಂದರೆ ಇವರಿಬ್ಬರೂ ಸ್ಕೈಪ್ ಮೂಲಕ ವಿಡಿಯೋ ಕಾಲ್ ಮಾಡಿಕೊಂಡು ಎಲ್ಲೇ ಇದ್ದರೂ ಊಟದ ಸಮಯಕ್ಕೆ ಒಂದಾಗುತ್ತಾರೆ. ಮಾತಾಡಿಕೊಂಡೇ ಊಟ ಮಾಡುತ್ತಾರೆ.

ಇದು  ಇಬ್ಬರೂ ದೇಶದ ಯಾವುದೇ ಮೂಲೆಯಲ್ಲಿದ್ದರೂ ಓಕೆ. ಒಂದು ವೇಳೆ ವಿದೇಶಕ್ಕೆ ಹೋದಾಗ ಅಲ್ಲಿನ ಸಮಯಕ್ಕೂ, ಇಲ್ಲಿನ ಸಮಯಕ್ಕೂ ವ್ಯತ್ಯಾಸ ಇರುತ್ತೆ. ಆಗ ಏನು ಮಾಡುತ್ತಾರೆ? ಎನ್ನುವ ಪ್ರಶ್ನೆ ಎದ್ದರೆ ಅದಕ್ಕೆ ಉತ್ತರ, ಆಗಲೂ ಅವರು ಸಮಯ ಹೊಂದಿಗೆ ಮಾಡಿಕೊಂಡು ಜೊತೆಗೇ ಊಟ ಮಾಡುತ್ತಾರಂತೆ. ಹಾಗೆ ಊಟ ಮಾಡಿದರೆ ಇಬ್ಬರಿಗೂ ಸಖತ್ ಖುಷಿಯಾಗುತ್ತದಂತೆ. ಇದೆಲ್ಲವನ್ನೂ ಕೇಳಿದ
ಅಭಿಮಾನಿಗಳು ಅಬ್ಬಾ, ಇವರಿಬ್ಬರ ಅನ್ಯೋನತೆ ಹೇಗಿದೆ! ಗಂಡ ಹೆಂಡತಿ ಎಂದರೆ ಹೀಗಿರಬೇಕು ಎಂದುಕೊಂಡಿದ್ದರೆ ಅಚ್ಚರಿ ಇಲ್ಲ.  

[-ಸಾಂದರ್ಭಿಕ ಚಿತ್ರ]

loader