ಬಿ ಟೌನ್'ನಿಂದ ಹೊರ ಬಿದ್ದಿದೆ ಗುಡ್'ನ್ಯೂಸ್; ಬಾಲಿವುಡ್ ಈ ಬೆಡಗಿಗೆ ಸದ್ಯದಲ್ಲೇ ಕೂಡಿ ಬರಲಿದೆ ಕಂಕಣ ಭಾಗ್ಯ

First Published 11, Jan 2018, 11:45 AM IST
Sonam Kapoor get Married Soon
Highlights

ಬಿಟೌನ್‌ನಲ್ಲಿ ಮದುವೆ ಎಂದರೆ ಸದ್ಯಕ್ಕೆ ನೆನಪಾಗುವುದು ಅನುಷ್ಕಾ ಮತ್ತು ವಿರಾಟ್. ವರ್ಷಗಟ್ಟಲೆ ಹಾಗೆ ಹೀಗೆ ಎಂದು ಗುಸುಗುಸು ಶುರುವಾಗಿ ಇಟಲಿಯಲ್ಲಿ ನಡೆದ  ಮದುವೆಯಿಂದ ಆ ಬಗೆಗಿನ ಚರ್ಚೆಗೆ ಒಂದು ಹಂತದ ತೆರೆ ಬಿದ್ದರೂ ಕೂಡ ಅಲ್ಲಲ್ಲಿ ಅವರ ಹನಿಮೂನ್ ಟ್ರಿಪ್‌ಗಳ ಗುಸುಗುಸು ಇದ್ದೇ ಇದೆ. ಈಗ ಅದೆಲ್ಲವೂ ಹಳತಾಗಿ ಬಿಟೌನ್‌'ನ  ಇನ್ನೊಬ್ಬಳು ಸುಂದರಿ ಸೋನಂ ಕಪೂರ್ ಮದುವೆಯಾಗುತ್ತಾರಂತೆ ಎನ್ನುವ ಸುದ್ದಿ ಹರಿದಾಡಹತ್ತಿತ್ತು. ಈಗ ಅದಕ್ಕೆ ಸ್ವತಃ ಸೋನಂ ಜೀವ ನೀಡಿದ್ದು ಎಸ್ ಐ ವಿಲ್ ಮ್ಯಾರಿ ವಿಥ್ ಆನಂದ್ ಎನ್ನುವ ಮೂಲಕ ಹೊಸ ಸುದ್ದಿ ಹೇಳಿದ್ದಾರೆ.

ಮುಂಬೈ (ಜ.11): ಬಿಟೌನ್‌ನಲ್ಲಿ ಮದುವೆ ಎಂದರೆ ಸದ್ಯಕ್ಕೆ ನೆನಪಾಗುವುದು ಅನುಷ್ಕಾ ಮತ್ತು ವಿರಾಟ್. ವರ್ಷಗಟ್ಟಲೆ ಹಾಗೆ ಹೀಗೆ ಎಂದು ಗುಸುಗುಸು ಶುರುವಾಗಿ ಇಟಲಿಯಲ್ಲಿ ನಡೆದ  ಮದುವೆಯಿಂದ ಆ ಬಗೆಗಿನ ಚರ್ಚೆಗೆ ಒಂದು ಹಂತದ ತೆರೆ ಬಿದ್ದರೂ ಕೂಡ ಅಲ್ಲಲ್ಲಿ ಅವರ ಹನಿಮೂನ್ ಟ್ರಿಪ್‌ಗಳ ಗುಸುಗುಸು ಇದ್ದೇ ಇದೆ. ಈಗ ಅದೆಲ್ಲವೂ ಹಳತಾಗಿ ಬಿಟೌನ್‌'ನ  ಇನ್ನೊಬ್ಬಳು ಸುಂದರಿ ಸೋನಂ ಕಪೂರ್ ಮದುವೆಯಾಗುತ್ತಾರಂತೆ ಎನ್ನುವ ಸುದ್ದಿ ಹರಿದಾಡಹತ್ತಿತ್ತು. ಈಗ ಅದಕ್ಕೆ ಸ್ವತಃ ಸೋನಂ ಜೀವ ನೀಡಿದ್ದು ಎಸ್ ಐ ವಿಲ್ ಮ್ಯಾರಿ ವಿಥ್ ಆನಂದ್ ಎನ್ನುವ ಮೂಲಕ ಹೊಸ ಸುದ್ದಿ ಹೇಳಿದ್ದಾರೆ.

ಕಳೆದ ಹತ್ತು ವರ್ಷ ಸಿನಿ ಪಯಣದಲ್ಲಿ ಎಲ್ಲಿಯೂ ನಾನು ನನ್ನ ವೈಯಕ್ತಿಕ  ವಿಚಾರಗಳ ಬಗ್ಗೆ ಹೇಳಿಕೊಂಡಿಲ್ಲ. ಅದು ನನಗೆ ಇಷ್ಟವೂ ಇಲ್ಲ ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದ ಸೋನಂ ಈಗ ಮದುವೆ ವಿಚಾರವೂ ಕೂಡ ಹೆಚ್ಚು ವೈರಲ್  ಆಗಬಾರದು ಎನ್ನುವ ಉದ್ದೇಶಕ್ಕೆ ಇರುವುದನ್ನು ನೇರವಾಗಿ ಹೇಳಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೆ ಏಪ್ರಿಲ್‌ನಲ್ಲಿ ಸೋನಂ ಆನಂದ್ ಅವರ ಕೈ ಹಿಡಿಯಲಿದ್ದಾರೆ. ಅದು ರಾಜಸ್ಥಾನದಲ್ಲಿ.

ಮದುವೆ ಹೇಗೆ ಇರಲಿದೆ?  

ಯಾರೆಲ್ಲಾ ಬಂದು ಹರಸಲಿದ್ದಾರೆ ಎನ್ನುವದಕ್ಕೆ ಈಗ ಸಿಕ್ಕಿರುವ ಉತ್ತರ, ಮದುವೆಗೆ ಆತ್ಮೀಯರಾದ ಕೇವಲ 300 ಮಂದಿ ಸೇರಲಿದ್ದಾರಂತೆ. ಇದೆಲ್ಲವನ್ನೂ ಬಿಟ್ಟು ಬೇರೆ ಸಂಗತಿಗಳೆಲ್ಲವೂ ಮುಂದೆ ನಾವೇ ತಿಳಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ ಸೋನಂ. ಇದೆಲ್ಲದರಿಂದ ಇದೇ ವರ್ಷ ಸೋನಂ ಸಂಸಾರಸ್ಥೆಯಾಗುವುದು ಖಚಿತವಾಗಿದೆ.

 

loader