ನ್ಯೂಯಾರ್ಕ್(ಜು.11): ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಅವರ ಅಭಿಮಾನಿಗಳ ಕಣ್ಣನ್ನು ತೇವಗೊಳಿಸಿದೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ತಮ್ಮ ತಲೆ ಕೂದಲನ್ನು ಕತ್ತರಿಸಿಕೊಳ್ಳುತ್ತಿರುವ ಸೋನಾಲಿ ಬೇಂದ್ರೆ ವಿಡಿಯೋ , ಅವರ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ತಲೆ ಕೂದಲು ಕತ್ತರಿಸಿಕೊಳ್ಳುವ ಸಂದರ್ಭದಲ್ಲಿ ಖುದ್ದು ಸೋನಾಲಿ ಬೇಂದ್ರೆ ಅವರ ಕಣ್ಣಾಲಿಗಳು ಒದ್ದೆಯಾಗಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ತನ್ನ ತಲೆ ಕೂದಲನ್ನು ಕತ್ತರಿಸಿಕೊಳ್ಳುತ್ತಿರುವುದಾಗಿ ಸೋನಾಲಿ ತಿಳಿಸಿದ್ದಾರೆ. ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟವನ್ನು ತಾವು ಧೈರ್ಯದಿಂದ ಎದುರಿಸುತ್ತಿರುವುದಾಗಿ ಸೋನಾಲಿ ಹೇಳಿದ್ದಾರೆ.